ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿದ ಹಿನ್ನೆಲೆ ದರ್ಶನ್ ಹಾಗೂ ಉಳಿದ 6 ಆರೋಪಿಗಳು ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ. ಇದೀಗ ಜೈಲಿನಲ್ಲಿ 2 ದಿನಗಳನ್ನ ಕಳೆದಿರೋ ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಸಪೋರ್ಟ್ ಸಿಕ್ಕಿದೆ.

ದರ್ಶನ್ ಪರ ಅಖಾಡಕ್ಕೆ ಇಳಿದಿರೋ ವಿಜಯಲಕ್ಷ್ಮಿ, ಬೆಳಿಗ್ಗೆಯಿಂದ ದರ್ಶನ್ ಸಾಮಾಜಿಕ ಜಾಲತಾಣವನ್ನ ವಹಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಡೆವಿಲ್ ಸಿನಿಮಾಗಾಗಿ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡುತ್ತಾ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ರು. ಇನ್ಮುಂದೆ ದರ್ಶನ್ ಜೈಲಿನಿಂದ ಹೊರಬರೋವರೆಗೂ ವಿಜಯಲಕ್ಷ್ಮಿ ಎಲ್ಲವನ್ನು ಹ್ಯಾಂಡಲ್ ಮಾಡ್ತಾರಂತೆ. ದರ್ಶನ್ ಮತ್ತೆ ಹಿಂತಿರುಗೋ ವಿಶ್ವಾಸದಲ್ಲೇ ವಿಜಯಲಕ್ಷ್ಮಿ ಗಟ್ಟಿಹೆಜ್ಜೆ ಇಟ್ಟಿದ್ದಾರೆ.

ಇನ್ನು ದರ್ಶನ್ ಜಾಮೀನು ರದ್ದು ಕುರಿತಂತೆ ರಮ್ಯಾ ಕೂಡ ಮಾಧ್ಯಮಗಳಿಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಒಂದು ಆಡಿಯೋಕ್ಲಿಪ್ ಮೂಲಕ ದರ್ಶನ್ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ದ ರಮ್ಯಾ, ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡೆಯನ್ನು ಹಾಡಿಹೊಗಳಿದ್ದಾರೆ. ‘ವಿಜಯಲಕ್ಷ್ಮಿ ಕೂಡ ಒಬ್ಬ ಹೆಣ್ಣು, ಹಾಗಾಗಿ ಇದು ಒಳ್ಳೆ ಬೆಳವಣಿಗೆ ನಾನು ಈ ನಡೆಯನ್ನ ಸ್ವಾಗತಿಸ್ತೀನಿ’ ಅಂತ ವಿಜಯಲಕ್ಷ್ಮಿಗೆ ಸಪೋರ್ಟ್ ಮಾಡಿದ್ದಾರೆ.

ಅಲ್ಲದೇ, ತಮಗೆ ಬರುತ್ತಿದ್ದ ಕೆಟ್ಟ ಮೆಸೇಜುಗಳು ಈಗ ನಿಂತಿದೆ, ಇದರಿಂದ ಹೆಣ್ಣು ಮಕ್ಕಳ ಧೈರ್ಯ ಹೆಚ್ಚಾಗಿದೆ ಎಂದು ಎಲ್ಲವೂ ಸುಖಾಂತ್ಯ ಕಾಣೋ ಸಿಗ್ನಲ್ ಕೊಟ್ಟಿದ್ದಾರೆ.

ದರ್ಶನ್ ಎರಡನೇ ಬಾರಿ ಜೈಲಿಗೆ ಹೋದ್ರೂ ವಿಜಯಲಕ್ಷ್ಮಿ ನಿರ್ಧಾರ ಮತ್ತು ರಮ್ಯಾ ಮಾತುಗಳು ಡಿ ಬಳಗಕ್ಕೊಂದು ರಿಲೀಫ್ ನೀಡಿದೆ. ದರ್ಶನ್ ಗೆ ಬೇಲ್ ಸಿಗೋಕೆ ಇನ್ನು ಎಷ್ಟು ಸಮಯ ಬೇಕು ಅಂತ ನಿಖರವಾಗಿ ಹೇಳೋಕೆ ಆಗಲ್ಲ. ಕಾನೂನು ಸಲಹೆಗಾರರು ಅಷ್ಟು,ಇಷ್ಟು ಅಂತ ಟೈಮ್ ಹೇಳಿದ್ರು ಕೂಡ ದರ್ಶನ್ ಪರವಕೀಲರ ಮುಂದಿನ ಕಾನೂನು ನಡೆಯೇ ಎಲ್ಲದಕ್ಕೂ ಉತ್ತರ ಹೇಳಬೇಕಾಗಿದೆ..!

















