ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ಕಂಬಿ ಹಿಂದೆ ಮಾಡಿದ ತಪ್ಪಿಗೆ ನೋವು ಅನುಭವಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ (Darshan) ನೋಡಲು 4ನೇ ಬಾರಿ ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ. ಪ್ರತಿ ಬಾರಿ ಮಗನೊಂದಿಗೆ ಬರುತ್ತಿದ್ದ ವಿಜಯಲಕ್ಷ್ಮೀ ಇಂದು ಅತ್ತಿಗೆ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ್ ಜೊತೆ ಆಗಮಿಸಿದ್ದಾರೆ.
ದರ್ಶನ್ ಜೈಲಿಗೆ ಹೋದ ನಂತರ ಹೆಚ್ಚಿನ ಕಾಳಜಿ ವಹಿಸಿ ಪ್ರಕರಣದ ಹೋರಾಟದ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮಿ ಹೊತ್ತಿದ್ದಾರೆ.
ಪ್ರಕರಣದ ಕುರಿತು ಚರ್ಚಿಸಲು ಮತ್ತು ದರ್ಶನ್‌ರನ್ನು ನೋಡಲು ವಿಜಯಲಕ್ಷ್ಮಿ ಮತ್ತು ದಿನಕರ್ (Dinakar) ಜೊತೆ ಅಕ್ಕನ ಮಗ ಚಂದನ್ ಕೂಡ ಬಂದಿದ್ದಾರೆ. ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಆದರೆ, ವಾರದಲ್ಲಿ ಮೂರು ಬಾರಿಯೂ ದರ್ಶನ್ ಕುಟುಂಬಸ್ಥರು ಆಗಮಿಸುತ್ತಿದ್ದಾರೆ.