ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ದರ್ಶನ್ ಯಾರೊಂದಿಗೂ ಮಾತನಾಡುತ್ತಿಲ್ಲ. ಸದಾ ಪಾರ್ಟಿ ಎಂದು ಸುತ್ತಾಡುತ್ತ ನಾನ್ ವೆಜ್ ಮೂಡ ಮಾಡ್ತಾ, ಬೇಕಾದಾಗ ಮದ್ಯ ಸೇವಿಸ್ತಾ ಜಾಲಿ ಲೈಫ್ ಕಳೆಯುತ್ತಿದ್ದ ದರ್ಶನ್ ಗೆ ಈಗ ಜೈಲು ಸೇರುತ್ತಿಲ್ಲ. ಅಲ್ಲಿನ ಊಟವಂತೂ ಆಗುತ್ತಲೇ ಇಲ್ಲ. ಹೀಗಾಗಿ ಮನೆಯ ಊಟ ಬೇಕೆಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಮನೆಯೂಟಕ್ಕೆ ಅನುಮತಿ ನೀಡಿಲ್ಲ.
ಇದರ ಮಧ್ಯೆ ಇಂದು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಆಗಮಿಸಿದ್ದರು. ದರ್ಶನ್ ರನ್ನು ನೋಡಲು ಜೈಲಿಗೆ ಮತ್ತೊಮ್ಮೆ ಇಂದು ಅವರ ಕುಟುಂಬ ಭೇಟಿ ಕೊಟ್ಟಿದೆ. ಈ ಮೂಲಕ 3ನೇ ಬಾರಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಡ್ ಶೀಟ್, ಬಟ್ಟೆಯ ಜೊತೆ ಡ್ರೈ ಪ್ರೂಟ್ಸ್, ಸ್ನಾಕ್ಸ್, ಹಣ್ಣುಗಳನ್ನು ದರ್ಶನ್ ಗೆ ತಂದಿದ್ದರು. ಆದರೆ ಜೈಲಿನ ಚೆಕ್‌ಪೋಸ್ಟ್ ಹತ್ತಿರ ಹಣ್ಣುಗಳನ್ನಷ್ಟೇ ತನ್ನಿ, ಬೇರೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ತಡೆದಿದ್ದಾರೆ. ನಂತರ ಸಿಕ್ಕ ಸಮಯಾವಕಾಶದಲ್ಲಿಯೇ ಪತ್ನಿ, ಮಗ ಮತ್ತು ಅಕ್ಕನ ಮಗನನ್ನು ದರ್ಶನ್‌ರನ್ನು ಮಾತನಾಡಿಸಿ ತೆರಳಿದ್ದಾರೆ. ಜೈಲು ನಿಯಮಾವಳಿಗಳಂತೆ ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.