ಬೆಂಗಳೂರು: ವಿಧಾನ ಪರಿಷತ್ ಗೆ ಗೌರವ ಕಡಿಮೆ ಆಗುತ್ತಿದ್ದು, ಮುನ್ಸಿಪಾಲಿಟಿ ಆದಂತೆ ಆಗಿದೆ ಎಂದು ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ವಿಷಾಧಿಸಿದ್ದಾರೆ.
ನಾನು ಪರಿಷತ್ ಗೆ ಮೊದಲು ಆಯ್ಕೆಯಾದಾಗ 9.30ಕ್ಕೆ ಕಲಾಪ ಶುರುವಾಗುತ್ತಿತ್ತು, ರಾತ್ರಿ 8ಕ್ಕೆ ಮುಗಿಯುತ್ತಿತ್ತು. ಈಗ ಕಲಾಪಗಳೇ ಸರಿಯಾಗಿ ನಡೆಯುತ್ತಿಲ್ಲ. ನಮ್ಮ ದೇಶದಲ್ಲಿ ಎಲ್ಲಿಯವರೆಗೆ ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳುವವರು, ವೋಟ್ ಹಾಕುವವರು ಇರುತ್ತಾರೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಸರಿ ಆಗುವುದಿಲ್ಲ. ಕಾಲವೇ ಎಲ್ಲದನ್ನೂ ಸರಿ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲ ಶಾಸಕರಿಗೂ ಗಾಢ್ಫಾದರ್ ಇದ್ದಾರೆ. ಆದರೆ, ನನಗೆ ಯಾರೂ ಇಲ್ಲ. ರಾಜಕೀಯಕ್ಕೆ ನನ್ನನ್ನು ಯಾರೂ ಕರೆತಂದಿಲ್ಲ. ನಾನೇ ನನ್ನ ಸ್ವಂತ ಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ. ಎಲ್ಲದ್ದಕ್ಕೂ ಬಾವಿಗೆ ಬಂದು ಇಳಿದು ಧಿಕ್ಕಾರ ಕೂಗುವ ಅಭ್ಯಾಸ ಶುರುವಾಗಿದೆ. ನಾವೆಲ್ಲ ಅಜೆಂಡಾ ಇಟ್ಟುಕೊಂಡು ಓದಿಕೊಂಡು ಬರುತ್ತಿದ್ದೇವು. ಈಗ ಪ್ರಶ್ನೆ ಕೇಳಿ ಎರಡು ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.