ಪತ್ರಕರ್ತನ ಬಂಧನ
ಪ್ರಯಾಗ್‌ರಾಜ್: ಉತ್ತರಪ್ರದೇಶದ ಮಹಾಕುಂಭಮೇಳದಲ್ಲಿ (Mahakumbha mela) ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ಮಹಿಳೆಯರ ವಿಡಿಯೋವನ್ನು(Video of women) ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಅಶ್ಲೀಲವಾಗಿ ಕಮೆಂಟ್ ಮಾಡಿರುವ ಪತ್ರಕರ್ತರೊಬ್ಬರನ್ನು(Journalist) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪತ್ರಕರ್ತನನ್ನು ಉತ್ತರಪ್ರದೇಶದ ಬಾರಾಬಂಕಿಯ ಕಮ್ರಾನ್ (Kamran of Barabanki, Uttar Pradesh ಅಲ್ವಿ ಎಂದು ಗುರುತಿಸಲಾಗಿದೆ. ಈತ ಕುಂಭದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರ ಫೋಟೋ, ವಿಡಿಯೋವನ್ನು ಶೇರ್ ಮಾಡಿದ್ದಲ್ಲದೆ, ಆಕ್ಷೇಪಾರ್ಹ ಕಮೆಂಟ್ ಗಳನ್ನೂ ಹಾಕಿದ್ದ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು(police) ಕೇಸು ದಾಖಲಿಸಿಕೊಂಡು, ಈತನನ್ನು ಬಂಧಿಸಿದ್ದಾರೆ.
ಇದಿಷ್ಟೇ ಅಲ್ಲದೆ, ಕಮ್ರಾನ್ ಅಲ್ವಿ ಮಹಾಕುಂಭಮೇಳದ ಸಂಪ್ರದಾಯಗಳು ಮತ್ತು ಹಿಂದೂ ದೇವ ದೇವತೆಯರ ಬಗ್ಗೆಯೂ ಅವಹೇಳನಕಾರಿ ಕಮೆಂಟ್ ಗಳನ್ನು ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ಈತನ ಬಂಧನವನ್ನು ದೃಢಪಡಿಸಿರುವ ಎಎಸ್ಪಿ ಅಖಿಲೇಶ್ ನಾರಾಯಣ್ ಸಿಂಗ್, “ಸ್ಥಳೀಯ ಪತ್ರಕರ್ತ ಕಮ್ರಾನ್ ಅಲ್ವಿ ಮಹಾಕುಂಭಮೇಳದಲ್ಲಿ ಮಹಿಳೆಯರ ಆಕ್ಷೇಪಾರ್ಹ ವಿಡಿಯೋಗಳನ್ನು ಸೆರೆಹಿಡಿದು, ಅಪ್ಲೋಡ್ ಮಾಡಿದ್ದಾನೆ. ಅದರ ಬಗ್ಗೆ ಅಶ್ಲೀಲ ಕಮೆಂಟ್ ಗಳನ್ನೂ ಹಾಕಿದ್ದಾನೆ. ಈ ಬಗ್ಗೆ ತಿಳಿದುಬಂದ ಕೂಡಲೇ ಪೊಲೀಸರು ತತ್ ಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13ರಂದು ಆರಂಭವಾಗಿರುವ ಮಹಾಕುಂಭಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ. ಸುಮಾರು 45 ಕೋಟಿ ಜನರು ಕುಂಭಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.