ಚಂದನವನದಲ್ಲಿ ದಿಯಾ ಖ್ಯಾತಿಯ ನಂತರ ನಟ ದೀಕ್ಷಿತ್ ಶೆಟ್ಟಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ವೀಡಿಯೋ ಎಂಬ ಸಿನಿಮಾದ ಮೊದಲ ಟೀಸರ್ ಹಾಗೂ ಥೀಮ್ ಸಾಂಗ್ ಬಿಡುಗಡೆಗೊಳಿಸಲಾಯಿತು.
ಥ್ರಿಲ್ಲರ್ ವೀಡಿಯೋ ಸಿನಿಮಾದ ಶೇಕಡ 80ರಷ್ಟು ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದೆ ಶ್ರೀನಿಧಿ ಬೆಂಗಳೂರು ಅವರು ನಿರ್ದೇಶನ ಮಾಡಿರುವಂತಹ ಈ ಸಿನಿಮಾ ಸಕ್ಕತ್ ನಿರೀಕ್ಷೆ ಇದೆ. ಬ್ಲಿಂಕ್ ಸಿನಿಮಾ ತಂತ್ರಜ್ಞರು ಇದಕ್ಕೆ ಕೆಲಸ ಮಾಡಿದ್ದಾರೆ. ಇದರಲ್ಲಿ ಸಾಮಾನ್ಯ ಇದು ಸಾಮಾನ್ಯ ತರ ಬಿಲ್ಡಪ್ ಇಲ್ಲ. ರಿಯಾಕ್ಷನ್ ಗಳಿರಲ್ಲ. ಸ್ಲೋಮೋಷನ್ ಶಾಟ್ಸ್ ಇಲ್ಲ. ಹೆಚ್ಚುವರಿ ಲೈಟಿಂಗ್ಸ್ ಮಾಡುವಂತಿರಲ್ಲ. ನೈಜವಾಗಿ ಸಿಕ್ಕ ವಿಡಿಯೋ ಸಿದ್ದಾರೆ. ಶೆಟ್ಟಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಭರತ್ ಜೀವನ್ ಶಿವಕುಮಾರ್ ಕಿರುತೆರೆ ಖ್ಯಾತಿಯ ಪ್ರಿಯ ಜೆ ಆಚಾರ್, ಮುಂತಾದವರು ನಟಿಸಿದ್ದಾರೆ.
ವೀಡಿಯೋ ಸಿನಿಮಾದಲ್ಲಿ ಭರತ, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಗ್ರಣವಿರುವ ಈ ಚಿತ್ರಕ್ಕೆ ಖ್ಯಾತ ವಸ್ತ್ರವಿನ್ಯಾಸಕ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರಿಂದ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷವಾಗಿದ್ದು, ಧೀ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚೊಚ್ಚಲ ನಿರ್ಮಾಣ ವಿಡಿಯೋ ಚಿತ್ರವನ್ನ ಬ್ಲಿಂಕ್ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿದ್ದಾರೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ಚಿತ್ರ ತಂಡ ಇಲ್ಲಿಂದ ಚಿತ್ರೀಕರಣ ಆರಂಭಿಸಲಿದ್ದು, ಇದೇ ವರ್ಷ ಚಿತ್ರವನ್ನ ತೆರೆಗೆತರುವ ಸನ್ನಾಹದಲ್ಲಿದೆ.