ವಿಜಯಪುರ: ಶಾಸಕ ಯತ್ನಾಳ್ ಹತ್ಯೆಗೆ ಸ್ಕೆಚ್ ಹಾಕಿರುವ ಆಡಿಯೋ ಬಹಿರಂಗವಾಗಿರುವ ಬೆನ್ನಲ್ಲೇ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.
ಶುಕ್ರವಾರವಷ್ಟೇ ಯತ್ನಾಳ್ ಹತ್ಯೆಯ ಸಂಚಿನ ಆಡಿಯೋ ವೈರಲ್ ಆಗಿ ಸಾಕಷ್ಟು ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಜಯಪುರದ ಮತ್ತೋರ್ವ ಯುವಕ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾನೆ.
ಯತ್ನಾಳ್ ವಿರುದ್ಧ ಹೋರಾಟಕ್ಕೆ ಸೇರಿ, ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೆ ಜುದಾ ಎಂದು ವಿಡಿಯೋ ಮಾಡಿದ್ದಾನೆ. ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ಈ ವಿಡಿಯೋ ಮಾಡಿ, ಬಿಜಾಪುರ ಪೌಂಡೇಶನ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.
ನಮ್ಮ ಪ್ರವಾದಿಯನ್ನು ಟೀಕಿಸಿದವನನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಂರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ. ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧವಿದೆ. ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೇ ಜುದಾ ಎಂದು ವಿಡಿಯೋ ಮಾಡಿರುವ ಆತ, ವಿಡಿಯೋ ಕೊನೆಗೆ ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ ತಲೆ ಕತ್ತರಿಸೋದು ಎಂದು ನಾಲಿಗೆ ಹರಿಬಿಟ್ಟಿದ್ದಾನೆ.