ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ನಾಯಕರು ಈ ವೇಳೆ ಇದ್ದರು.
ಉಪರಾಷ್ಟ್ರಪತಿ ಚುನಾವಣೆಯ ಚುನಾವಣಾಧಿಕಾರಿಯೂ ಆಗಿರುವ ರಾಜ್ಯಸಭಾ ಕಾರ್ಯದರ್ಶಿ ಪಿ.ಸಿ ಮೋದಿಯವರಿಗೆ ರಾಧಾಕೃಷ್ಣನ್ ನಾಲ್ಕು ಸೆಟ್‌ಗಳ ನಾಮಪತ್ರವನ್ನು ಹಸ್ತಾಂತರಿಸಿದರು. ಅವರಿಗೆ ಮೋದಿ ಸಹಿತ ಇತರ ನಾಯಕರು ಸಾಥ್ ನೀಡಿದರು. ನಾಲ್ಕು ಸೆಟ್‌ಗಳ ನಾಮಪತ್ರಕ್ಕೆ ನರೇಂದ್ರ ಮೋದಿ, ರಾಜನಾಥ ಸಿಂಗ್, ಅಮಿತ್ ಶಾ ಹಾಗೂ ಜೆಡಿಯು ನಾಯಕ ರಾಜೀವ್ ರಂಜ್ ಸಿಂಗ್ ಅನುಮೋದಕರಾಗಿ ಸಹಿ ಹಾಕಿದ್ದಾರೆ.
ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ರಾಧಾಕೃಷ್ಣನ್ ಅವರಿಂದ ಸಹಿ ಪಡೆದುಕೊಂಡರು. ಬಳಿಕ ಪ್ರಧಾನಿ ಮೋದಿಯವರಿಗೆ ಸ್ವೀಕೃತಿ ಪತ್ರವನ್ನು ನೀಡಿದರು.