ಹಿಂದೂ ವಕೀಲರು ದೇಶದಾಧ್ಯಂತ ದಂಡು ಕಟ್ಟಿ ನಿಂತಿದ್ದಾರೆ!. ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತು ಧರ್ಮ ರಕ್ಷಣೆಗಾಗಿ ಪಣತೊಟ್ಟ ಸಶಕ್ತ ವಕೀಲರ ಪಡೆ ಹಿಂದೂಪರ ನ್ಯಾಯವಾದಕ್ಕೆ ಸಜ್ಜಾಗಿ ನಿಂತಿದೆ!. ಇದರ ಒಂದು ಭಾಗವಾಗಿ, “ನಮ್ಮ ರಾಜ್ಯಕ್ಕೆ ಸಂಬಂಧಪಟ್ಟಂತೆ, ಹಿಂದುತ್ವದ ಆಧಾರದ ಮೇಲೆ ಕೇಸು ಹಾಕಿಸಿಕೊಂಡವರ ಮತ್ತು ಕೇಸು ಹಾಕುವವರ(ಹಿಂದೂ) ಪರ ಧ್ವನಿಯಾಗಿ ನ್ಯಾಯವಾದ ಮಂಡಿಸಲು, ಹಿಂದೂ ವಕೀಲರ ಪಡೆ ಸದಾ ಸರ್ವ ಸನ್ನದ್ಧವಾಗಿದಲಿದೆ” ಎಂದು ಅಧಿಕೃತವಾಗಿ ಘೋಷಿಸಿಕೊಂಡಿದೆ. ಇದು ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತು ಧರ್ಮ ರಕ್ಷಣೆಗಾಗಿ, ಹಿಂದೂ ವಕೀಲರು ಕೈಗೊಂಡ ಉಚಿತ ಸೇವೆ ಎಂಬುದು ವಿಶೇಷ.

ಕಳೆದ ಎರಡೂವರೆ ವರ್ಷಗಳ ಹಿಂದೆ ‘ದಿಲೀಪ್ ಬಾಯ್ ತ್ರಿವೇಧಿ’ ಹಾಗೂ ‘ಅಭಿಶೇಕ್ ಅಟ್ರೆ’ಯವರ ಮುಂದಾಳತ್ವದಲ್ಲಿ ವಿಶ್ವ ಹಿಂದೂ ಪರಿಷತ್ “ವಿಧಿ ಪ್ರಕೋಷ್ಠ” (legal cell) ಎಂಬ ವಿಭಾಗ ರಚಿಸುವ ಮೂಲಕ, ರಾಷ್ಟ್ರ ಮಟ್ಟದಲ್ಲಿ ಸಂಘವು, ಹಿಂದೂ ಪರ ವಕೀಲರ ದಂಡು ಕಟ್ಟಿತು. ಅಂದು ಹಿಂದೂ ಪರ ನ್ಯಾಯವಾದಿಗಳು, ಹೋರಾಟಗಾರರು ಮತ್ತು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳ ಸಮ್ಮುಖದಲ್ಲಿ “ಲೀಗಲ್ ಸೆಲ್”ಗೆ ರಾಷ್ಟ್ರ ಮಟ್ಟದಲ್ಲಿ ಚಾಲನೆ ನೀಡಲಾಗಿತ್ತು. ಹಿಂದುತ್ವದ ಆಧಾರದ ಮೇಲೆ ಈ ರಾಷ್ಟ್ರದ ಯಾವುದೇ ಪ್ರಜೆಯ ಮೇಲೆ ದೌರ್ಜನ್ಯ, ದುರಾಚಾರ, ಅನಾಚಾರಗಳು ನಡೆದಾಗ ಈ ವಕೀಲರ ಗುಂಪು, ಕೋರ್ಟ್ ಮೂಲಕ ಹೋರಾಡುವ ಉದ್ದೇಶದೊಂದಿಗೆ, ನ್ಯಾಯವಾದಿಗಳ ಗುಂಪು ಕಟ್ಟಲಾಗಿತ್ತು. ಹಾಗೆಯೇ, ಕಳೆದ ಎರಡು ಸಾವಿರದ ಇಪ್ಪತ್ತಮೂರರ (2023) ಪೆಬ್ರವರಿ ತಿಂಗಳಲ್ಲಿ, ಕರ್ನಾಟಕ ರಾಜ್ಯದಲ್ಲೂ ಈ ಹಿಂದೂ ಪರಿಷತ್ತಿನ ಈ “ವಿಧಿ ಪ್ರಕೋಷ್ಟ” ವಿಭಾಗವನ್ನು ತೆರಯಲಾಯಿತು. ಅಲ್ಲಿಂದಾಚೆಗೆ ರಾಷ್ಟ್ರ ಹಾಗೂ ಹಿಂದುತ್ವ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧದ ಹಲವು ಕೇಸುಗಳನ್ನು ಕೈಗೆತ್ತಿಕೊಂಡು ನ್ಯಾಯ ಹೋರಾಟ ಮಾಡಲಾಗುತ್ತಿದೆ. ಆ ವಿಚಾರದಲ್ಲಿ ತುಸು ಹೆಚ್ಚು ಕಾರ್ಯಾಚರಣೆಯಲ್ಲಿರೂವುದು “ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ವಿಧಿ ಪ್ರಕೋಷ್ಟ”ದ ವಕೀಲರ ದಂಡು. ಇದೀಗ ಅದರ ಮುಂದುವರೆದ ಭಾಗವಾಗಿ ಈ “ಲೀಗಲ್ ಸೆಲ್” ಜಿಲ್ಲಾ, ತಾಲೂಕುವಾರು ಅಧ್ಯಕ್ಷರುಗಳನ್ನು ನೇಮಕ ಮಾಡಿಕೊಂಡಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮಲ್ಲಿ ಗೋಹತ್ಯೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಕೋಮು ಗಲಬೆ, ದೊಂಬಿ, ಗಲಾಟೆಯಂಥ ನಾನಾ ಪ್ರಕರಣಗಳ ವಿರುದ್ಧ ವಿಧಿ ಪ್ರಕೋಷ್ಠದ ಈ ವಕೀಲರ ದಂಡು ಹಿಂದೂಗಳ ಪರ ಕಟೀಬದ್ಧವಾಗಿ ಹಾಗೂ ಉಚಿತವಾಗಿ ಕಾರ್ಯ ನಿರ್ವಸಲಿದೆ ಎಂದು ಅಧೀಕೃತವಾಗಿ ಘೋಷಿಸಿಕೊಂಡಿದೆ.

ಇತ್ತೀಚೆಗೆ ಬೆಂಗಳೂರಿನ ಎನ್ಜಿಓ(NGO) ಹಾಲ್ ಅಲ್ಲಿ ಪದಾಧಿಕಾರಿಗಳ ಅಧಿಕೃತ ಘೋಷಣೆ ಮತ್ತು ಪದಾಧಿಕಾರಿಗಳನ್ನು ಸಂಘಕ್ಕೆ ಪರಿಚಯಿಸುವ ಸಮಾರಂಭ ನಡೆಯಿತು. ಅಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನ್ಯಾಯವಾದಿಗಳು ಮತ್ತು ಹಿಂದೂಪರ ಹೋರಾಟಗಾರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ “ವಿಧಿ ಪ್ರಕೋಷ್ಠವನ್ನು”ವನ್ನು ರಾಜ್ಯದ್ಯಾಂತ ಕಾರ್ಯಾಚರಣೆಯಲ್ಲಿಡಲು ತೀರ್ಮಾನಿಸಲಾಯಿತು. ಈ ಲೀಗಲ್ ಸೆಲ್ ಮೂಲಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಕೀಲರುಗಳು ಆಯಾಯ ಕೋರ್ಟ್ ಸಂಬಂಧಿಸಿದಂತೆ ಬರುವ ಹಿಂದೂಗಳ ದೂರುಗಳನ್ನು ಸಮರ್ಥವಾಗಿ ನಿಭಾಯಿಸಿ, ನ್ಯಾಯ ದೊರಕಿಸಿ ಕೊಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಧರ್ಮ ರಕ್ಷಣೆಯಲ್ಲಿ ವಕೀಲರ ಪಾತ್ರ ಹೇಗಿರಬೇಕು? ಆ ನಿಟ್ಟಲ್ಲಿ ಏನೇನು ಕ್ರಮ ಕೈಗೊಳ್ಳಬೇಕಿದೆ? ಈ ವಿಧಿ ಪ್ರಕೋಷ್ಠದ ಮೂಲಕ ವಕೀಲರಾದ ನಮ್ಮಿಂದ, ಹಿಂದುತ್ವ ಹಾಗೂ ಹಿಂದೂಗಳ ರಕ್ಷಣೆ ಹೇಗೆ ಆಗಬೇಕಿದೆ? ಎಂಬುದರ ಬಗ್ಗೆ ಅಲ್ಲೊಂದು ಗಟ್ಟಿ ನಿಲುವಿಗೆ ಬರಲಾಗಿದೆ. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿಗಳಾದ “ಸ್ಥಾನು ಮಲಯನ್” ಹಾಗೂ ಕೇಂದ್ರೀಯ ವಿಧಿ ಪ್ರಕೋಷ್ಠದ ಅಧ್ಯಕ್ಷರಾದ ನ್ಯಾಯವಾದಿ “ದಿಲೀಪ್ ಬಾಯ್ ತ್ರಿವೇಧಿ” ಮತ್ತು ಉಪಾಧ್ಯಕ್ಷ (ಕೋ-ಕನ್ವಿನರ್) ಅಭಿಷೇಕ್ ಅಟ್ರೆಯವರು ಹಾಗೂ ವಿಎಚ್ ಪಿ ರಾಜ್ಯ ಪ್ರಾಂತ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತ್ರೀ, ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲ್ ರಘು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಸೇರಿದಂತೆ ವಕೀಲರ ಸಂಘ ಮತ್ತು ಪರಿಷತ್ತಿನ ಹಲವು ವಕೀಲರು ಹಾಗು ವಿಧಿ ಪ್ರಕೋಷ್ಟದ ಪದಾಧಿಕಾರಿಗಳು ಸರ್ವ ಸದಸ್ಯರ ತಂಡ ಪಾಲ್ಗೊಂಡು, ಹಿಂದೂ ಬಾಂಧವರ ಪರ ನ್ಯಾಯಾಲಯದಲ್ಲಿ ಸದಾ “ಒಗ್ಗೂಡಿ ಹೋರಾಡುವ ಭರವಸೆ” ಇತ್ತರು.

ಇನ್ನು, ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ವಿಧಿ ಪ್ರಕೋಷ್ಠಕ್ಕೆ “ನ್ಯಾಯವಾದಿ ಪ್ರದೀಶ್ ಕುಮಾರ್ ಅಧ್ಯಕ್ಷ”ರಾಗಿ ಹಾಗು “ನ್ಯಾಯವಾದಿ ಪ್ರಕಾಶ್ ಶೆಟ್ಟಿ ಉಪಾಧ್ಯಕ್ಷ”ರಾಗಿ ಆಯ್ಕೆಗೊಂಡು ಕಾರ್ಯನಿರತರಾಗಿದ್ದು, ಈ ಇಬ್ಬರು ನ್ಯಾಯವಾದಿಗಳು ದಕ್ಷಿಣಪ್ರಾಂತದಲ್ಲಿ ಸಲ್ಲಿಕೆಯಾಗುವ ದೂರುಗಳ ಆಗು-ಹೋಗುಗಳಲ್ಲಿ ಸದಾ ಕಣ್ಣಿಡುವ ಜವಾಬ್ದಾರಿಯನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ನೆರಳಲ್ಲಿ ಲೀಗಲ್ ಸೆಲ್ ಮೂಲಕ “ಸೇವ್ ಅವರ್ ಗರ್ಲ್” & “ಸೇವ್ ಅವರ್ ಲ್ಯಾಂಡ್” & “ಸೇವ್ ಅವರ್ ಟೆಂಪಲ್” ಸೇರಿದಂತೆ ರಾಷ್ಟ್ರ ಮತ್ತು ಧರ್ಮ ಪರ ಕಾರ್ಯಕ್ರಮ ರೂಪಿಸಿ ಕಾರ್ಯಾಚರಣೆಗಿಳಿಯಲು ಸಿದ್ಧತೆಮಾಡಿಕೊಳ್ಳಲಾಗಿದೆ.

ಒಟ್ಟಿನಲ್ಲಿ ಹಿಂದೂ ಪರ ಧ್ವನಿಯಾಗಲು ಸಮರ್ಥ ಮತ್ತು ಸಮಾನ ಮನಸ್ಕ ವಕೀಲರ ದಂಡು ಸರ್ವಸನ್ನದ್ಧವಾಗಿ ನಿಂತಿದೆ. ರಾಜ್ಯಾದಾಧ್ಯಂತ ಪ್ರತಿ ಕೋರ್ಟ್ ಆವರಣದಲ್ಲೂ ಈ ವಕೀಲರ ಪಡೆ ಕಾರ್ಯಾಚರಣೆಯಲ್ಲಿರಲಿದೆ.
ಈ ಹಿಂದೆ ಹಿಂದುತ್ವದ ಹೆಸರಲ್ಲಿ ಕೇಸು ಹಾಕಿಸಿಕೊಂಡು ಕೋರ್ಟನಲ್ಲಿ ಕೇಸು ನಡೆಸಲಾಗದೆ, ಸೋತು ಬಸವಳಿದ ಅದೆಷ್ಟೋ ಉದಾಹರಣೆಗಳಿವೆ. ಆ ನಿಟ್ಟಲ್ಲಿ ಇನ್ನು ಮುಂದೆ ರಾಷ್ಟ್ರ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಕೇಸುಗಳಲ್ಲಿ ಹಿಂದೂ ಪರಿಷತ್ತಿನ ಈ ವಿಧಿ ಪ್ರಕೋಷ್ಠದ ವಕೀಲರು ಆಪತ್ಬಾಂಧವರಾಗಿ ಕಾರ್ಯಕ್ಕೆ ಬರಲಿದ್ದಾರೆ.
ಹಾಗಾಗಿ ನಿಮ್ಮ ಸುತ್ತ-ಮುತ್ತಲಲ್ಲಿ ರಾಷ್ಟ್ರ ಮತ್ತು ಧರ್ಮ ವಿರೋಧಿ ಚಟುವಟಿಕೆಗಳು ಕಂಡು ಬಂದಲ್ಲಿ, ಹಾಗೆಯೇ ಹಿಂದುತ್ವಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳ ಬಗ್ಗೆ ವಕೀಲರಿಂದ ಸಹಾಯ, ಸಹಕಾರ ಬೇಕಿದ್ದಲ್ಲಿ ನಿಮ್ಮ ಹತ್ತಿರದ “ವಿಶ್ವ ಹಿಂದೂ ಪರಿಷತ್” ಕಚೇರಿಗೆ ನೇರವಾಗಿ ಭೇಟಿಕೊಡಿ.