ಶಿವಮೊಗ್ಗ : ನೀರಾನೆಯ ಬಾಯಿಗೆ ಪಶು ವೈದ್ಯೆಯೊಬ್ಬರು ಬಲಿಯಾಗಿರುವ ದುರ್ಘಟನೆ ಶಿವಮೊಗ್ಗದ ಹುಲಿ ಮತ್ತು ಸಿಂಹ ಧಾಮದಲ್ಲಿ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ಮೂಲದ ಸಮೀಕ್ಷಾ ರೆಡ್ಡಿ(27) ನೀರಾನೆಗೆ ಬಲಿಯಾದ ಪಶುವೈದ್ಯ. ನಿನ್ನ ರಾತ್ರಿ 11:30ರ ಸುಮಾರಿಗೆ ನೀರಾನೆಯ ತಾಪಮಾನ ಪರೀಕ್ಷೆ ಮಾಡುವ ವೇಳೆ ಈ ಘಟನೆ ನಡೆದಿದೆ.
ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಾಪಮಾನ ಪರೀಕ್ಷೆ ಮಾಡಿದ ನಂತರ ನೀರಾನೆ ಹಠಾತ್ ಆಗಿ ಸಮೀಕ್ಷಾ ರೆಡ್ಡಿ ಮೇಲೆ ಎರಗಿದೆ. ತಕ್ಷಣವೇ ಅಲದಲಿಯ ಸಿಬ್ಬಂದಿಗಳು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕರುಳು ಮತ್ತಿತರ ಭಾಗಕ್ಕೆ ತೀವ್ರ ಪೆಟ್ಟಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಮೀಕ್ಷಾ ರೆಡ್ಡಿ ಮೃತಪಟ್ಟಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದ ಸಮೀಕ್ಷಾ ರೆಡ್ಡಿ ಬನ್ನೇರಘಟ್ಟದ ಸಕ್ಕಲವಾರ ನಿವಾಸಿಯಾದ ಉದ್ಯಮಿ ಧೃವಕುಮಾರ್ ಮತ್ತು ಶೈಲಜಾ ದಂಪತಿಯ ಏಕೈಕ ಪುತ್ರಿಯಾಗಿದ್ದರು, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪಶು ವೈದ್ಯಕೀಯ ಪದವಿ ವ್ಯಾಸಂಗ ಮಾಡಿದ್ದ ಸಮೀಕ್ಷಾ ರೆಡ್ಡಿ, ಒಂದುವರೆ ತಿಂಗಳಿನಿಂದ ಪಶು ವೈದ್ಯಕೀಯ ಸಂಬಂಧಿತ ಚಿಕಿತ್ಸೆಯ ತರಬೇತಿ ಪಡೆಯುತ್ತಿದ್ದರು. ಈ ಹಿನ್ನೆಲೆ ಗರ್ಭಿಣಿ ನೀರಾನೆಯ ಆರೋಗ್ಯ ತಪಾಸಣೆಗೆ ತೆರಳಿದ್ದ ವೇಳೆ ಈ ದುರಂತ ನಡೆದಿದೆ. ವಿಷಯ ತಿಳಿಯುತಿದಂತೆ ಸಮೀಕ್ಷಾ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದು, ಘಟನೆಯಯಿಂದಾಗಿ ತೀವ್ರ ಆಘಾತ ಗೊಂಡಿದ್ದಾರೆ.
ಇದನ್ನೂ ಓದಿ : ದೇವನಹಳ್ಳಿಯಲ್ಲಿ ಭೀಕರ ಅಪಘಾತ.. ಬೈಕ್ ಸವಾರ ಬಲಿ



















