ಬಹುಭಾಷಾ ಗಾಯಕಿ ಉಷಾ ಉತ್ತುಪ್ (Usha Uthup) ಅವರ ಪತಿ ಇಹಲೋಕ ತ್ಯಜಿಸಿದ್ದಾರೆ.
ಪತಿ ಜಾನಿ ಚಾಕೋ ಉತ್ತುಪ್ ಜು.8ರಂದು ಹೃದಯಾಘಾತಕ್ಕೆ ಸೋಮವಾರ ಬಲಿಯಾಗಿದ್ದಾರೆ. 78ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ಜಾನಿ ಚಾಕೋಗೆ (Jani Chacko) ಕುಟುಂಬಸ್ಥರು ಆಪ್ತರು ಕಂಬನಿ ಮಿಡಿದಿದ್ದಾರೆ.
ಜು.8ರಂದು ತಮ್ಮ ಕೋಲ್ಕತ್ತಾದ ನಿವಾಸದಲ್ಲಿ ಟಿವಿ ನೋಡ್ತಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳವಾರ ಜಾನಿ ಚಾಕೋ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಹುಭಾಷಾ ಗಾಯಕಿಯಾಗಿ ಹೆಸರು ಮಾಡಿರುವ ಉಷಾ ಉತ್ತುಪ್ ಅವರು ಕನ್ನಡದ ‘ಸ್ವಾಮಿ’ ಚಿತ್ರದ ರಂಬೆ ನಿನಗೆ, ಇತ್ತೀಚೆಗೆ ತೆರೆಕಂಡ ಅಭಿಷೇಕ್ ಅಂಬರೀಶ್, ರಚಿತಾರಾಮ್ ನಟನೆಯ ‘ಬ್ಯಾಡ್ ಮ್ಯಾನರ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಡಿದ್ದಾರೆ. ಇವರು ಉಷಾ ಅವರ ಎರಡನೇ ಪತಿ ಎನ್ನಲಾಗಿದೆ.