ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ, ಹಿರಿಯ ನಟ ಜಗ್ಗೇಶ್ ಅವರನ್ನು ಮಲ್ಲೇಶ್ವರದಲ್ಲಿರುವ ನಿವಾಸಕ್ಕೆ ತೆರಳಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ವೇಳೆ ಗಿಲ್ಲಿಗೆ ಸನ್ಮಾನ ಮಾಡಿ ಶುಭಹಾರೈಸಿದ ಜಗ್ಗೇಶ್, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ವರ್ಷದ ಹಿಂದೆಯೇ ಗಿಲ್ಲಿ ಜನಮನ ಗೆಲ್ಲುತ್ತಾರೆ ಎಂದು ಜಗ್ಗೇಶ್ ಭವಿಷ್ಯ ನುಡಿದಿದ್ದು, ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಭಾರೀ ಸದ್ದು ಮಾಡಿತ್ತು. ಇದೀಗ ಆ ಭವಿಷ್ಯ ನಿಜವಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಅವರಿಗೆ ಸಿಕ್ಕ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ಎಷ್ಟಿತ್ತೆಂದರೆ, ಜಗ್ಗೇಶ್ ಹೇಳಿದಂತೆಯೇ ಅವರು ಪೊಲೀಸ್ ರಕ್ಷಣೆ ಮತ್ತು ಬಾಡಿಗಾರ್ಡ್‌ಗಳ ನಡುವೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಈಗಲೂ ಗಿಲ್ಲಿ ನಟ ಯಾವುದಾದರೂ ಇವೆಂಟ್‌ಗೆ ಬಂದರೆ, ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ನೀಡಲಾಗುತ್ತದೆ. ಅಷ್ಟರಮಟ್ಟಿಗೆ ಜನರ ಪ್ರೀತಿಯನ್ನು ಗಿಲ್ಲಿ ನಟ ಸಂಪಾದಿಸಿದ್ದಾರೆ.
ಅಂದಹಾಗೆ, ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಶಿವರಾಜ್‌ಕುಮಾರ್, ಸುದೀಪ್ ಅವರನ್ನು ಗಿಲ್ಲಿ ನಟ ಭೇಟಿಯಾಗಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಎಂಟಿಬಿ ನಾಗರಾಜ್ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ : ಮಲ್ಪೆ ಡೆಲ್ಟಾ ಬೀಚ್ ಬೋಟ್ ದುರಂತ | ಯೂಟ್ಯೂಬರ್ ನಿಶಾ, ಮಧು ಗೌಡ ಗೆಳತಿ ಸಾವು!



















