ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ ಕಲಾ ರಂಗದಲ್ಲಿ ಅವರ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಬಣ್ಣದ ಬದುಕಿನಲ್ಲಿ 52 ವರ್ಷದ ಸುದೀರ್ಘ ಅನುಭವವನ್ನು ಹೊಂದಿರುವ ಅನಂತ್ ನಾಗ್ ಅವರು ಎಂಥದ್ದೇ ಪಾತ್ರವಿದ್ದರೂ ನಿರಾಯಾಸವಾಗಿ ತೆರೆ ಮೇಲೆ ನಟಿಸಿ ಕೋಟ್ಯಾಂತರ ಜನರ ಮನಗೆದ್ದಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನಾ ನಿನ್ನ ಬಿಡಲಾರೆ, ಬಯಲುದಾರಿ, ಅಂಕುರ್ ಮೂವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಯಶಸ್ಸು ಕಂಡಿದ್ದಾರೆ.