ಬೆಂಗಳೂರು: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ನಡುವೆಯೇ, ಇದೀಗ ವಾಹನ ದರ ಕೂಡ ಏರಿಕೆಯಾಗಲು ಸಜ್ಜಾಗಿದೆ. ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಭಾರ ಬೀಳಲಿದೆ.
ವಾಹನ ತಯಾರಿಕಾ ಕಂಪನಿಗಳ ಮಾಹಿತಿ ಪ್ರಕಾರ, ಕಾರುಗಳ ದರದಲ್ಲಿ ಸುಮಾರು 4%ರವರೆಗೆ ಹಾಗೂ ದ್ವಿಚಕ್ರ ವಾಹನಗಳಲ್ಲಿ 2%ರವರೆಗೆ ಏರಿಕೆ ಸಾಧ್ಯತೆ ಇದೆ.
ದರ ಏರಿಕೆಗೆ ಪ್ರಮುಖ ಕಾರಣಗಳು:
- ಉಕ್ಕಿನ ದರ ಏರಿಕೆ
- ವಿದೇಶಿ ಆಮದು ವೆಚ್ಚ ಹೆಚ್ಚಳ
- ತಯಾರಿಕಾ ವೆಚ್ಚದ ಭಾರೀ ಏರಿಕೆ
ಈ ಎಲ್ಲಾ ಅಂಶಗಳು ಸೇರಿ ಕಂಪನಿಗಳು ದರ ಹೆಚ್ಚಿಸಲು ತೀರ್ಮಾನಿಸಿವೆ.
ಗ್ರಾಹಕರಿಗೆ ಎಷ್ಟು ಹೆಚ್ಚುವರಿ ಭಾರ..?
- 1 ಲಕ್ಷದ ಬೈಕ್: 2,000–3,000 ರೂ. ಹೆಚ್ಚಳ
- 2 ಲಕ್ಷದ ವಾಹನ: 5,000–₹6,000 ರೂ. ಹೆಚ್ಚಳ
- 5 ಲಕ್ಷದ ಕಾರು: 15,000–₹20,000 ರೂ. ಹೆಚ್ಚಳ
- 10 ಲಕ್ಷದ ಕಾರು: 30,000–₹40,000 ರೂ. ಹೆಚ್ಚಳ
ಈ ದರ ಏರಿಕೆ ಸಾಮಾನ್ಯ ಕಾರುಗಳಿಂದ ಲಕ್ಸುರಿ ವಾಹನಗಳವರೆಗೆ ಅನ್ವಯವಾಗಲಿದೆ.
ಯಾರ ಮೇಲೆ ಹೆಚ್ಚು ಪರಿಣಾಮ..?
- ಆಟೋ ಮತ್ತು ಕ್ಯಾಬ್ ಚಾಲಕರು
- ವಾಹನ ಆಧಾರಿತ ಜೀವನ ನಡೆಸುವವರು
- ಮಧ್ಯಮ ವರ್ಗದ ಕುಟುಂಬಗಳು
ಇದಲ್ಲದೆ, EMI ಮತ್ತು ಇಂಧನ ವೆಚ್ಚಗಳು ಈಗಾಗಲೇ ಹೆಚ್ಚಿರುವ ಸಂದರ್ಭದಲ್ಲಿ, ಹೊಸ ದರ ಏರಿಕೆ ಮಧ್ಯಮ ವರ್ಗದ ಜನರ “ಸ್ವಂತ ಕಾರು” ಕನಸನ್ನು ಮತ್ತಷ್ಟು ದೂರ ಮಾಡಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ.
ಮಾಹಿತಿ ಪ್ರಕಾರ, ವಾಹನ ಖರೀದಿ ಯೋಚನೆ ಇರುವವರು ಏಪ್ರಿಲ್‌ಗೂ ಮುನ್ನವೇ ನಿರ್ಧಾರ ಕೈಗೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.



















