ಚಿಕ್ಕೋಡಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನದ ಬ್ರೇಕ್ ಫೇಲ್ ಆಗಿ ಮಹಿಳೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಮಳೆಯಲ್ಲಿ ಬ್ರೇಕ್ ಫೇಲ್ ಆಗಿ ಮಹೀಂದ್ರಾ ಪಿಕಪ್ ವಾಹನ ಅಪಘಾತವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ರೇಕ್ ಫೇಲ್ ಆಗಿ ಜೋರಾಗಿ ಬಂದ ಪಿಕಪ್ ವಾಹನ ಆಯತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೋಂಡ ಮಹಿಳೆಯನ್ನು ಉಮರಾಣಿ ಗ್ರಾಮದ ಸರಿತಾ ಮಾರುತಿ ಮಗದುಮ್ಮ( 28) ಎಂದು ಗುರುತಿಸಲಾಗಿದೆ. ಮಹಿಳೆಗೆ ಡಿಕ್ಕಿಯಾದ ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.