ಬೆಂಗಳೂರು: ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ನಿರ್ದೇಶನದಲ್ಲಿ ಹೊಸ ಪ್ರಯೋಗವೊಂದನ್ನು ಮಾಡಿದ್ದು, ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.
ಯಕ್ಷಗಾನ ಹಿನ್ನೆಲೆ ಹೊಂದಿರುವ ವೀರ ಚಂದ್ರಹಾಸ ಸಿನಿಮಾ ಮಾಡಿದ್ದು, ಚಿತ್ರ ಇಂದು ತೆರೆಗೆ ಬಂದಿದೆ. ನೆಲದ ಸೊಗಡಾದ ಯಕ್ಷಗಾನವನ್ನು ವಿಶ್ವಕ್ಕೆ ತೋರಿಸಬೇಕೆಂಬ ಆಸೆಯೊಂದಿಗೆ ಈ ಚಿತ್ರ ಮಾಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ತಾಯ್ನಾಡಿನ ಕಲೆಗೆ ಪ್ರೋತ್ಸಾಹಿಸುವ ಕಾರ್ಯವು ಈ ಸಿನಿಮಾದಿಂದ ಸಿಕ್ಕಿದೆ.
ಜನ ಕೂಡ ಮೆಚ್ಚಿಕೊಂಡಿದ್ದಾರೆ. ಮುಂದೆ ಕಲೆ ಪ್ರೋತ್ಸಾಹಿಸುವ ಹಾಗೂ ಜನಪದ ಕಲೆಗಳನ್ನು ಗುರುತಿಸಿ ಬೆಳೆಸುವ ಪರಂಪರೆ, ಈ ಚಿತ್ರದಿಂದ ಸಾಗಲಿ ಎಂದು ಎಂದು ಹಲವರು ಹಾರೈಸುತ್ತಿದ್ದಾರೆ. ಇದಕ್ಕೆ ರವಿ ಬಸ್ರೂರ್ ಹಾಗೂ ತಂಡ ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು. ಚಿತ್ರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.



















