ಇಲ್ಲಿ ಗಾಳಿಯ ವೇಗ ಬೇರೆ ಪ್ರದೇಶಗಳಿಗೆ ಹೋಲಿಸಿದ್ರೆ, ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಈ ಪ್ರದೇಶದಲ್ಲಿ ಇವತ್ತಿಗೂ ಕೂಡ ವಾಯು ತಪಸ್ಸು ಮಾಡ್ತಾ ಇದ್ದಾನೆ. ಇದೇ ಕಾರಣಕ್ಕೆ ದೇವಾಲಯದ ಸುತ್ತ ವಾಯುವಿನ ಅರ್ಭಟ ಇರುವುದಿಲ್ಲ ಎನ್ನುವ ನಂಬಿಕೆ ಇದೆ. ನಾವು ಹೇಳ್ತಾ ಇರೋ ಪ್ರದೇಶ ಎಲ್ಲಿದೆ..? ಯಾವ ಕ್ಷೇತ್ರದ ಬಗ್ಗೆ ಹೇಳ್ತಾ ಇದಾರೆ ಅನ್ನೋ ಕುತೂಹಲ ನಿಮ್ಮಲ್ಲಿ ಈಗಾಗಲೇ ಮೂಡಿರುತ್ತೆ. ಸೋ ವೇಟ್ ಅ ಮಿನಟ್. ನಾವು ಹೇಳೋಕೆ ಹೊರಟಿರೋದು ಶ್ರೀ ಕ್ಷೇತ್ರ ಕಾಳಹಸ್ತಿಯ ಬಗ್ಗೆ.
ಕಾಳಹಸ್ತಿ ದೇವಾಲಯದ ಬಗ್ಗೆ ನೀವು ಕೇಳಿರಬಹುದು. ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು ಕಾಳಹಸ್ತಿಯ ದರ್ಶನ ಮಾಡುತ್ತಾರೆ. ಇದೊಂದು ಪ್ರಾಚೀನ ದೇವಾಲಯವಾಗಿದ್ದು, ಪಾಪ ನಿವಾರರಣೆಗೆ ಕೊನೆಯದಾಗಿ ಈ ದೇವಾಲಯವನ್ನು ಭೇಟಿ ನೀಡುತ್ತಾರೆ. ಶ್ರೀಕಾಳಹಸ್ತಿ ಪದವು ಶ್ರೀ, ಕಾಳ ಮತ್ತು ಹಸ್ತಿ ಎಂಬ ಮೂರು ಪದಗಳ ಸಂಯೋಜನೆಯಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಶ್ರೀ ಎಂಬ ಪದವು ಜೇಡ, ಹಾವುಗಳಿಗೆ ಕಾಳ ಮತ್ತು ಆನೆಗೆ ಹಸ್ತಿ ಎಂದು ಸೂಚಿಸುತ್ತದೆ. ಈ ಮೂರೂ ಪ್ರಾಣಿಗಳು ಶಿವನನ್ನು ಪ್ರಾರ್ಥಿಸಿ ಈ ಸ್ಥಳದಲ್ಲಿ ಮೋಕ್ಷವನ್ನು ಪಡೆದಿವೆ ಎಂದು ತಿಳಿದುಬಂದಿದೆ ಮತ್ತು ಈ ಮೂರು ಪ್ರಾಣಿಗಳನ್ನು ಚಿತ್ರಿಸುವ ಪ್ರತಿಮೆಯನ್ನು ಮುಖ್ಯ ದೇವಾಲಯದ ಮುಂದೆ ಇರಿಸಲಾಗಿದೆ.
ಕಾಳಹಸ್ತಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸುವರ್ಣಮುಖಿ ನದೀತೀರದಲ್ಲಿರುವ ಪ್ರಮುಖ ಶೈವ ಯಾತ್ರಾಸ್ಥಳ. ದಕ್ಷಿಣ ಕೈಲಾಸವೆಂದು ಪ್ರಸಿದ್ಧವಾಗಿದೆ. ಇದರ ಬಳಿಯಲ್ಲಿರುವ ಬೆಟ್ಟಕ್ಕೆ ಕೈಲಾಸಗಿರಿಯೆಂದು ಹೆಸರು. ಕಾಳಹಸ್ತಿ ಪ್ರದೇಶ ಸಾತವಾಹನ, ಪಲ್ಲವ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿತ್ತು.
ಸಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮುಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ, ಲಿಂಗವನ್ನು ಸ್ಥಾಪಿಸಿದ್ದಿರಬಹುದೆಂದು ಊಹಿಸಲಾಗಿದೆ. ಅನಂತರ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಯಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮಿತವಾಗಿರಬಹುದು. ಪಂಚಮುಖ ದೇವಾಲಯ ಹಾಗೂ ಶಿವ ಮತ್ತಿತರ ವಿಗ್ರಹಗಳಿಗೂ ಮಹಾಬಲಿಪುರಂ ದೇವಾಲಯಗಳು ಮತ್ತು ವಿಗ್ರಹಗಳಿಗೂ ಹೆಚ್ಚು ಹೋಲಿಕೆ ಕಂಡುಬರುತ್ತದೆ.ಆದರೂ ಪಲ್ಲವರ ಕಾಲದ ಶಾಸನಗಳು ಇಲ್ಲಿ ದೊರೆತಿಲ್ಲ.
ಕಾಳಹಸ್ತಿಯು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ದೈವಿಕ ಪ್ರಯಾಣದ ಅನುಭವವನ್ನು ನೀಡುತ್ತವೆ. ಕಾಳಹಸ್ತಿಯ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಭಾರದ್ವಾಜ ತೀರ್ಥಂ, ಕಾಳಹಸ್ತಿ ದೇವಸ್ಥಾನ ಮತ್ತು ಶ್ರೀ ದುರ್ಗಾ ದೇವಾಲಯಗಳಿವೆ.
ಸಾಮಾನ್ಯವಾಗಿ ಕಾಳಹಸ್ತಿ ದೇವಸ್ಥಾನವನ್ನು ಭೇಟಿ ಮಾಡಲು ಹೋದಾಗ ಹಲವಾರು ದೇವಾಲಯವನ್ನು ಭೇಟಿ ನೀಡುತ್ತಾರೆ. ಆದರೆ ನೀವು ಕಾಳಹಸ್ತಿ ದೇವಸ್ಥಾನವನ್ನು ಭೇಟಿ ಮಾಡಿದ ಮೇಲೆ ಬೇರೆ ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಬಾರದು ಒಂದು ವೇಳೆ ಹಾಗೇನಾದರೂ ಭೇಟಿ ನೀಡಿದ್ದಲ್ಲಿ ದಾರಿದ್ರ್ಯ ನಿಮ್ಮ ಬೆನ್ನು ಹತ್ತುತ್ತಂತೆ. ಕೊನೆಯದಾಗಿ ಕಾಳಹಸ್ತಿ ದೇವಸ್ಥಾನಕ್ಕೆ ಹೋಗಿ ಪಾಪಗಳನ್ನು ಬಿಟ್ಟು ಮನೆಗೆ ಹಿಂದಿರುಗಬೇಕಂತೆ. ಹಾಗಾಗಿ ಹೆಚ್ಚಿನವರು ಬೇರೆ ಯಾವುದೇ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ.
ಈ ಪ್ರದೇಶದಲ್ಲಿ ಇಂದಿಗೂ ವಾಯು ತಪಸ್ಸು ಮಾಡ್ತಿದಾನೆ! ಈ ದೇವಸ್ಥಾನದ ದರ್ಶನ ಮಾಡಿದವರಿಗೆ ಸಕಲವೂ ಪ್ರಾಪ್ತಿ!
ಇಲ್ಲಿ ಗಾಳಿಯ ವೇಗ ಬೇರೆ ಪ್ರದೇಶಗಳಿಗೆ ಹೋಲಿಸಿದ್ರೆ, ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಈ ಪ್ರದೇಶದಲ್ಲಿ ಇವತ್ತಿಗೂ ಕೂಡ ವಾಯು ತಪಸ್ಸು ಮಾಡ್ತಾ ಇದ್ದಾನೆ. ಇದೇ ಕಾರಣಕ್ಕೆ ದೇವಾಲಯದ ಸುತ್ತ ವಾಯುವಿನ ಅರ್ಭಟ ಇರುವುದಿಲ್ಲ ಎನ್ನುವ ನಂಬಿಕೆ ಇದೆ. ನಾವು ಹೇಳ್ತಾ ಇರೋ ಪ್ರದೇಶ ಎಲ್ಲಿದೆ..? ಯಾವ ಕ್ಷೇತ್ರದ ಬಗ್ಗೆ ಹೇಳ್ತಾ ಇದಾರೆ ಅನ್ನೋ ಕುತೂಹಲ ನಿಮ್ಮಲ್ಲಿ ಈಗಾಗಲೇ ಮೂಡಿರುತ್ತೆ. ಸೋ ವೇಟ್ ಅ ಮಿನಟ್. ನಾವು ಹೇಳೋಕೆ ಹೊರಟಿರೋದು ಶ್ರೀ ಕ್ಷೇತ್ರ ಕಾಳಹಸ್ತಿಯ ಬಗ್ಗೆ.
ಕಾಳಹಸ್ತಿ ದೇವಾಲಯದ ಬಗ್ಗೆ ನೀವು ಕೇಳಿರಬಹುದು. ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು ಕಾಳಹಸ್ತಿಯ ದರ್ಶನ ಮಾಡುತ್ತಾರೆ. ಇದೊಂದು ಪ್ರಾಚೀನ ದೇವಾಲಯವಾಗಿದ್ದು, ಪಾಪ ನಿವಾರರಣೆಗೆ ಕೊನೆಯದಾಗಿ ಈ ದೇವಾಲಯವನ್ನು ಭೇಟಿ ನೀಡುತ್ತಾರೆ. ಶ್ರೀಕಾಳಹಸ್ತಿ ಪದವು ಶ್ರೀ, ಕಾಳ ಮತ್ತು ಹಸ್ತಿ ಎಂಬ ಮೂರು ಪದಗಳ ಸಂಯೋಜನೆಯಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಶ್ರೀ ಎಂಬ ಪದವು ಜೇಡ, ಹಾವುಗಳಿಗೆ ಕಾಳ ಮತ್ತು ಆನೆಗೆ ಹಸ್ತಿ ಎಂದು ಸೂಚಿಸುತ್ತದೆ. ಈ ಮೂರೂ ಪ್ರಾಣಿಗಳು ಶಿವನನ್ನು ಪ್ರಾರ್ಥಿಸಿ ಈ ಸ್ಥಳದಲ್ಲಿ ಮೋಕ್ಷವನ್ನು ಪಡೆದಿವೆ ಎಂದು ತಿಳಿದುಬಂದಿದೆ ಮತ್ತು ಈ ಮೂರು ಪ್ರಾಣಿಗಳನ್ನು ಚಿತ್ರಿಸುವ ಪ್ರತಿಮೆಯನ್ನು ಮುಖ್ಯ ದೇವಾಲಯದ ಮುಂದೆ ಇರಿಸಲಾಗಿದೆ
ಕಾಳಹಸ್ತಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸುವರ್ಣಮುಖಿ ನದೀತೀರದಲ್ಲಿರುವ ಪ್ರಮುಖ ಶೈವ ಯಾತ್ರಾಸ್ಥಳ. ದಕ್ಷಿಣ ಕೈಲಾಸವೆಂದು ಪ್ರಸಿದ್ಧವಾಗಿದೆ. ಇದರ ಬಳಿಯಲ್ಲಿರುವ ಬೆಟ್ಟಕ್ಕೆ ಕೈಲಾಸಗಿರಿಯೆಂದು ಹೆಸರು. ಕಾಳಹಸ್ತಿ ಪ್ರದೇಶ ಸಾತವಾಹನ, ಪಲ್ಲವ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿತ್ತು.
ಸಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮುಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ, ಲಿಂಗವನ್ನು ಸ್ಥಾಪಿಸಿದ್ದಿರಬಹುದೆಂದು ಊಹಿಸಲಾಗಿದೆ. ಅನಂತರ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಯಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮಿತವಾಗಿರಬಹುದು. ಪಂಚಮುಖ ದೇವಾಲಯ ಹಾಗೂ ಶಿವ ಮತ್ತಿತರ ವಿಗ್ರಹಗಳಿಗೂ ಮಹಾಬಲಿಪುರಂ ದೇವಾಲಯಗಳು ಮತ್ತು ವಿಗ್ರಹಗಳಿಗೂ ಹೆಚ್ಚು ಹೋಲಿಕೆ ಕಂಡುಬರುತ್ತದೆ. ಆದರೂ ಪಲ್ಲವರ ಕಾಲದ ಶಾಸನಗಳು ಇಲ್ಲಿ ದೊರೆತಿಲ್ಲ.