ಬೆಂಗಳೂರು: ಜಲಮಂಡಳಿಯಿಂದ ಹಲವೆಡೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 20ರಂದು ಗುರುವಾರ ಬೆಂಗಳೂರಿನ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
BWSSBಯಿಂದ ಕಾವೇರಿ 4ನೇ ಹಂತ 2ನೇ ಘಟ್ಟದ (ಪೂರ್ವ )-1 ರ ವ್ಯಾಪ್ತಿಯಲ್ಲಿ ಮಾರತ್ತಹಳ್ಳಿ, ಜೀವಿಕಾ ಆಸ್ಪತ್ರೆ ಹತ್ತಿರ 800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್ ಒಳ ಹರಿವು ಮಾರ್ಗವನ್ನು ಸ್ಥಗಿತಗೊಳಿಸಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯ ಉಂಟಾಗಲಿದೆ ಎಂದು ತಿಳಿದು ಬಂದಿದೆ.
ಫೆಬ್ರವರಿ 20ರಂದು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರತ್ತಹಳ್ಳಿ, ದೊಡ್ಡನ್ನೆಕುಂದಿ, ಮುನ್ನೆಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳ್ಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಜಲ ಮಂಡಳಿ ಮನವಿ ಮಾಡಿದೆ.