ಮಂಗಳೂರು: ಕರ್ನಾಟಕದ ಸೂರತ್ಕಲ್ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NITK) ಒಂದು ಬಿಐಎಂ ಲ್ಯಾಬ್ ಮ್ಯಾನೇಜರ್ ಹಾಗೂ ಒಂದು ಸ್ಕಿಲ್ಡ್ ಮ್ಯಾನ್ ಪವರ್ ಹುದ್ದೆ ಖಾಲಿ ಇವೆ. ಎನ್ಐಟಿಕೆಯು ಎರಡೂ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈಗಿನಿಂದಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅನುಸರಿಸುವುದು ಉತ್ತಮವಾಗಿದೆ.
ಲ್ಯಾಬ್ ಮ್ಯಾನೇಜರ್ ಹುದ್ದೆಗೆ ಶೈಕ್ಷಣಿಕ ಅರ್ಹತೆ
ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಿಂದ ಸಿವಿಲ್ ಎಂಜಿನಿಯರಿಂಗ್/ಆರ್ಕಿಟೆಕ್ಚರ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳು. ವಿವಿಧ ವರ್ಗಗಳ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ. ಅರ್ಹತೆ, ಅನುಭವ ಮತ್ತು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ [email protected] ಇ-ಮೇಲ್ ಐಡಿಗೆ ಮಾರ್ಚ್ 16 ರಂದು ಅಥವಾ ಅದಕ್ಕೂ ಮೊದಲು ಅಗತ್ಯವಿರುವ ಎಲ್ಲ ದಾಖಲೆಗಳೊಂದಿಗೆ ಕಳುಹಿಸಬಹುದು. ಬಳಿಕ ನಿಗದಿತ ದಿನಾಂಕದಂದು ನೇರ ಸಂದರ್ಶನದಲ್ಲಿ ಭಾಗಿಯಾಗಬೇಕು. ಸುರತ್ಕಲ್ ನ ಸಿವಿಲ್ ಎಂಜಿನಿಯರಿಂಗ್ ವಿಭಾಗ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ವಾಕ್ ಇನ್ ಇಂಟರ್ ವ್ಯೂ ಇರಲಿದೆ.
ಸ್ಕಿಲ್ಡ್ ಮ್ಯಾನ್ ಪವರ್ ಹುದ್ದೆ ಮಾಹಿತಿ
ಹುದ್ದೆ- 01
ಸ್ಥಳ- ಸುರತ್ಕಲ್
ಶೈಕ್ಷಣಿಕ ಅರ್ಹತೆ- ಸ್ನಾತಕೋತ್ತರ ಪದವಿ
ನೇಮಕಾತಿ: ಟೆಸ್ಟ್ ಹಾಗೂ ಇಂಟರ್ ವ್ಯೂ
ಅರ್ಜಿ ಸಲ್ಲಿಸುವ ವಿಳಾಸ: ರಿಜಿಸ್ಟ್ರಾರ್, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ- ಸುರತ್ಕಲ್, ಮಂಗಳೂರು. 575025. ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಮಾರ್ಚ್ 14 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಹೆಚ್ಚಿನ ಮಾಹಿತಿಗೆ nitk.ac.in ಸಂಪರ್ಕಿಸಿ.