ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (UPSC Recruitment 2025) ಖಾಲಿ ಇರುವ 241 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜುಲೈ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 28ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಗ್ರೇಡ್ ಎ ಹಾಗೂ ಗ್ರೇಡ್ ಬಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೈಂಟಿಫಿಕ್ ಆಫೀಸರ್, ಸ್ಪೆಶಲಿಸ್ಟ್ ಸೇರಿ ಒಟ್ಟು 241 ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಯುಪಿಎಸ್ಸಿ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ತಜ್ಞ ವೈದ್ಯರು – 72 ಹುದ್ದೆ
ಬೋಧಕ – 19 ಹುದ್ದೆ
ಹಿರಿಯ ವೈಜ್ಞಾನಿಕ ಸಹಾಯಕ – 20 ಹುದ್ದೆ
ಆಡಳಿತಾಧಿಕಾರಿ – 8 ಹುದ್ದೆ
ಕಾನೂನು ಅಧಿಕಾರಿ – 5 ಹುದ್ದೆ
ವಿಜ್ಞಾನಿ ಬಿ – 5 ಹುದ್ದೆ
ಸಹಾಯಕ ಜಿಲ್ಲಾ ವಕೀಲರು – 9 ಹುದ್ದೆ
ಹಿರಿಯ ವಿನ್ಯಾಸ ಅಧಿಕಾರಿ – 7 ಹುದ್ದೆ
ಜೂನಿಯರ್ ಸೈಂಟಿಫಿಕ್ ಆಫೀಸರ್ – 17 ಹುದ್ದೆ
ಸಹಾಯಕ ಶಾಸಕಾಂಗ ಸಲಹೆಗಾರ – 14 ಹುದ್ದೆ
ಉಪ ಶಾಸಕಾಂಗ ಸಲಹೆಗಾರ – 9 ಹುದ್ದೆ
ವಿದ್ಯಾರ್ಹತೆ ಏನು?
ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ವೈಜ್ಞಾನಿಕ ಅಧಿಕಾರಿಗಳಿಗೆ ರಾಸಾಯನಶಾಸ್ತ್ರ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪೇಪರ್ ಟೆಕ್ನಾಲಜಿಯಲ್ಲಿ B.E./B.Tech ಪದವಿ ಅಗತ್ಯವಿದೆ. ಸ್ಪೆಶಲಿಸ್ಟ್ ಗ್ರೇಡ್ III ಹುದ್ದೆಗಳಿಗೆ MBBS ಜತೆಗೆ ಸಂಬಂಧಿತ ವಿಶೇಷತೆಯಲ್ಲಿ ಸ್ನಾತಕೋತ್ತರ ಪದವಿ (MD/MS/DNB) ಮತ್ತು ಕನಿಷ್ಠ ಮೂರು ವರ್ಷಗಳ ಕಾರ್ಯಾನುಭವ ಬೇಕು.
ವೇತನ ಎಷ್ಟು?
ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ಲೆವೆಲ್-7 (44,900-1,42,400 ರೂ.) ರಿಂದ ಲೆವೆಲ್-12 (78,800-2,09,200 ರೂ.) ವರೆಗೆ ವೇತನವ ನೀಡಲಾಗುತ್ತದೆ. ವೇತನ ಮಾತ್ರವಲ್ಲದೆ ಡಿಎ, ಎಚ್ಆರ್ಎ, ಟಿಎ ಮತ್ತು ಕೆಲವು ವೈದ್ಯಕೀಯ ಹುದ್ದೆಗಳಿಗೆ ಎನ್ ಪಿ ಎ (ನಾನ್-ಪ್ರಾಕ್ಟಿಸಿಂಗ್ ಅಲೋವೆನ್ಸ್) ಲಭ್ಯವಿದೆ. 30-40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಜನರಲ್, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದವರಿಗೆ 25 ರೂಪಾಯಿ ಅರ್ಜಿ ಶುಲ್ಕವಿದ್ದರೆ, ಉಳಿದವರಿಗೆ ವಿನಾಯಿತಿ ನೀಡಲಾಗಿದೆ.