ದಾವಣಗೆರೆ: ಶಿವಾಜಿ ಮಹಾರಾಜರು ಅಫ್ಜಲ್‌ಖಾನ್ ಕೊಲ್ಲುವ ದೃಶ್ಯದ ಫ್ಲೆಕ್ಸ್ ತೆರವು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡ ‘ಹಿಂದೂ ಆಡಳಿತ ದಾವಣಗೆರೆ’ ಪೇಜ್‌ನ ಅಡ್ಮಿನ್ ವಿರುದ್ಧ ದಾವಣಗೆರೆಯ ಆಜಾದ್ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಮಟ್ಟಿಕಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ನನ್ನು ಕೊಲ್ಲುವ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದಕ್ಕೆ ಕೆಲವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ಫ್ಲೆಕ್ಸ್ ಬದಲಾಯಿಸಲು ಮುಂದಾದ ಸಂಧರ್ಭದಲ್ಲಿ ಯುವಕರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ವಾಗ್ವಾದದ ವಿಡಿಯೋ ಜೊತೆ ಪ್ರಚೋದನಾತ್ಮಕ ಬರಹವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವಿಡಿಯೋ ಅಪ್‌ಲೋಡ್ ಮತ್ತು ಶೇರ್ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.