ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದೆ. ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸಿದ್ದರಿಂದಲೇ ಈ ಸಮಸ್ಯೆ ಎದುರಾಗಿದೆ ಅಂತಾ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇಂದು ಮಧ್ಯಾಹ್ನ ರಿಯಲ್ ಸ್ಟಾರ್ ಗೆ ತೀವ್ರ ಹೊಟ್ಟೆ ಉರಿ ಶುರುವಾಗಿತ್ತು.
ಆರಂಭದಲ್ಲಿ ಮನೆಯಲ್ಲೇ ಪ್ರಥಮ ಚಿಕಿತ್ಸೆ ಪಡೆದ್ರೂ ಚೇತರಿಕೆ ಕಾಣಿಸಲಿಲ್ಲ. ಹೀಗಾಗಿ ಮನೆ ಬಳಿಯೇ ಇರುವ ಸ್ಪರ್ಶ್ ಆಸ್ಪತ್ರೆಗೆ ತೆರಳಿದ್ದ ಅವರನ್ನು ವೈದ್ಯರು ಅಡ್ಮಿಟ್ ಮಾಡಿಕೊಂಡು, ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಹಿಂದೆ ಯುಐ ಸಿನಿಮಾ ಚಿತ್ರೀಕರಣದ ವೇಳೆಯೂ ಉಪ್ಪಿ ಇಂಥದ್ದೇ ಸಮಸ್ಯೆಯಿಂದ ಬಳಲಿದ್ರು. ಸದ್ಯ ಉಪೇಂದ್ರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಬೇಡ ಅಂತಾ ಪತ್ನಿ ಪ್ರಿಯಾಂಕ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.