ಉಪೇಂದ್ರ ಶಿಷ್ಯ ರವಿ ಗೌಡ ಹಾಗೂ ವಿಜೇತಾ ಜೋಡಿಯಾಗಿ ನಟಿಸಿರುವ ‘ಐ ಆ್ಯಮ್ ಗಾಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಜಿತಿನ್ ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೆಂಬರ್ 7ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ಬಾರಿ ಸಂಚಲನ ಮೂಡಿಸಲಾಗಿದೆ.
ಉಪೇಂದ್ರ ಅವರ ಶಿಷ್ಯ ರವಿ ಗೌಡ ನಿರ್ದೇಶಿ, ನಟಿಸಿ, ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಉಪೇಂದ್ರರವರು ಮುಖ್ಯ ಅತಿಥಿಯಾಗಿ ಬಂದಿದ್ದು, ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ನೀಡಿದ್ದಾರೆ. ಈ ಸಿನಿಮಾ ಲವ್ ಸ್ಟೋರಿ ವಿತ್ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಆಗಿದೆ. ಈಗಾಗಲೇ ಈ ಸಿನಿಮಾದ 2 ಹಾಡುಗಳು ಹಿಟ್ ಆಗಿವೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ.
‘ಐ ಆ್ಯಮ್ ಗಾಡ್’ ಎಂಬ ಡೈಲಾಗ್ ಕೇಳಿದರೆ ಉಪೇಂದ್ರ ಅವರೇ ನೆನಪಾಗುತ್ತಾರೆ. ‘ಎ’ ಸಿನಿಮಾ ಆ ಡೈಲಾಗ್ ಅಷ್ಟು ಫೇಮಸ್. ರವಿ ಗೌಡ ಅವರು ಉಪೇಂದ್ರರ ಗರಡಿಯಲ್ಲಿ ಪಳಗಿದ್ದಾರೆ. ಉಪೇಂದ್ರ ಜೊತೆ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿ ಅವರು ಅನುಭವ ಪಡೆದರು. ಈಗ ‘ಐ ಆ್ಯಮ್ ಗಾಡ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಉಪೇಂದ್ರ ಅವರಿಗೆ ‘ಐ ಆ್ಯಮ್ ಗಾಡ್’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಟ್ರೇಲರ್ ಬಿಡುಗಡೆ ಬಳಿಕ ಅವರು ಮಾತನಾಡಿ, ತಮ್ಮ ಶಿಷ್ಯನ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದರು. ‘ಉಪ್ಪಿ 2’ ಸಿನಿಮಾದ ಸಂದರ್ಭದಲ್ಲಿ ರವಿ ಗೌಡ ಬಹಳ ಆಸಕ್ತಿಯಿಂದ ಸಿನಿಮಾದ ಕೆಲಸಗಳನ್ನು ಕಲಿಯುತ್ತಿದ್ದರು ಎಂಬುದನ್ನು ಉಪೇಂದ್ರ ಹೇಳಿದರು.
ಇದನ್ನು ಓದಿ : ರಂಗತರಬೇತಿ, ಇತಿಹಾಸಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ- ‘ಹಿಸ್ಟರಿ ಮೇಕರ್ಸ್’!



















