ರಿಯಲ್ ಸ್ಟಾರ್ ಉಪೇಂದ್ರ ಎಂದರೇ ಪ್ರೇಕ್ಷಕರಿಗೆ ಅಲ್ಲೊಂದು ಹಿಡಿ ಹೆಚ್ಚೇ ನಿರೀಕ್ಷೆ ಇರುತ್ತೆ. ಆ ಮಟ್ಟಿಗೆ ಉಪೇಂದ್ರ ಚಿತ್ರ ಕಟ್ಟುವುದರಲ್ಲಿ ನಿಸ್ಸೀಮ. ಉಲ್ಟಾ ಹೇಳೋದು, ಉಲ್ಟಾ ತೋರಿಸೋದು ಈ ನಿರ್ದೇಶಕನ ಮರ್ಮ ಎನ್ನಬಹುದು. ಅದು ಜನರಿಗೆ ಹಿಡಿಸುವುದರಿಂದಲೇ ಉಪೇಂದ್ರ ರಿಯಲ್ ಸ್ಟಾರ್ ಆಗಿದ್ದು. ಈ ಬಾರಿ ಯುಐ ಚಿತ್ರದ ಮೂಲಕ ನಮ್ಮ ನಿಮ್ಮ ನಡುವಿನ ಇನ್ನೇನನ್ನು ಎಳೆದು ತರುತ್ತಾರೋ ಎಂಬ ಕುತೂಹಲ ಸಹಜವಾಗೇ ಅನೌನ್ಸ್ ಆದಾಗಿನಿಂದಲೂ ಹುಟ್ಟಿಕೊಂಡಿದೆ. ಚಿತ್ರ ಇದೇ ಡಿಸೆಂಬರ್ ಇಪ್ಪತ್ತಕ್ಕೆ ತೆರೆಕಾಣಲಿದೆ.

ಅಸಲಿಗೆ, ಈ ಉಪೇಂದ್ರ ಖಾಲಿ ನಟನೆ ಮಾಡಿದ ಚಿತ್ರಗಳು ಎಂದಿಗೂ ಅಂಥ ಸದ್ದು ಮಾಡಿದ್ದಿಲ್ಲ. ಬದಲಿಗೆ ಖುದ್ದು ಅವರದ್ದೇ ನಿರ್ದೇಶನ ಅಂದಾಗ ಪ್ರೇಕ್ಷಕ ಹುಚ್ಚೇಳುತ್ತಾನೆ. ಆ ಮಟ್ಟಿಗೆ ನಿರ್ದೇಶನದಲ್ಲಿ ಉಪ್ಪಿ ಕ್ರೇಜ್ ಹುಟ್ಟು ಹಾಕಿದ್ದಾರೆ. ಈಗ ಯುಐ ಕೂಡ ಅದೇ ಕ್ರೇಜಿನಲ್ಲಿ ಬಿಡುಗಡೆ ಹೊಸ್ತಿಲಿಗೆ ಬಂದಿದೆ. ಚಿತ್ರ ಅನೌನ್ಸ್ ಆದಾಗಿನಿಂದಲೂ ಅದೇ ಹೈಪಿನಲ್ಲಿದೆ. ನಾನು-ನೀನು ಎಂಬ ಉಪ್ಪಿಯ ಲೆಕ್ಕಾಚಾರದಲ್ಲಿ ಏನೇನು ಹೇಳಿಯಾರು ಎಂಬ ಸಹಜ ಕುತೂಹಲದಲ್ಲೇ ಮೊದಲು ಚಿತ್ರ ಮಂದಿರ ತುಂಬಿಕೊಳ್ಳೋದು ಫಿಕ್ಸ್! ಹಾಗೆಯೇ ಚಿತ್ರ ಚೆನ್ನಾಗಿದ್ದರೇ!!?