ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ರಸ್ತೆ ಅಡ್ಡಗಟ್ಟಿ ಬರ್ತಡೇ ಸೆಲೆಬ್ರೇಷನ್ ಮಾಡುತ್ತಿರುವ ಘಟನೆ ನಗರದ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ನಡು ರಸ್ತೆಯಲ್ಲೇ ಗ್ಯಾಂಗ್ ಬೈಕ್ ಅಡ್ಡ ನಿಲ್ಲಿಸಿ ಕೇಕ್ ಕಟ್ ಮಾಡಿ, ಪಟಾಕಿ ಹೊಡೆದು ಬರ್ತಡೆ ಪಾರ್ಟಿ ಮಾಡಿದ್ದಾರೆ. ಅಲ್ಲದೆ ವಾಹನ ಸವಾರರಿಗೆ ಪಕ್ಕದ ರಸ್ತೆಯಲ್ಲಿ ಹೊಗುವಂತೆ ಧಮ್ಕಿ ಹಾಕಿದ್ದಾರೆ. ರಸ್ತೆಯಲ್ಲಿ ಓಡಾಡ್ತಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪವು ಕೇಳಿ ಬಂದಿದೆ.
ಪುಂಡರ ಬರ್ತಡೆ ಸೆಲೆಬ್ರೇಷನ್ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಬಳಿಕ ಚಂದ್ರಲೇಔಟ್ ಪೊಲೀಸರು ಮಾಹಿತಿ ಕಲೆಹಾಗುತ್ತಿದ್ದಾರೆ.
ಇದನ್ನೂ ಓದಿ : ಗದಗ | ಕಂಟ್ರೋಲ್ ತಪ್ಪಿ ಅಂಗಡಿಗೆ ಗುದ್ದಿದ ಕಾರು


















