ಯಾದಗಿರಿ : ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ, ಅದು ಅವರಿಗೆ ಸಂಬಂಧನೇ ಇಲ್ಲ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾನ ಮೇಲೆ ಪೋಕ್ಸೋ ಕೇಸ್ ವಿಚಾರವಾಗಿ ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರಣಬಸಪ್ಪಗೌಡ ದರ್ಶನಾಪುರ, ಮಲ್ಲಿಕಾರ್ಜುನ ಮುತ್ಯಾ ಅವರು 6 ವರ್ಷದ ಮಗುವಿಗೆ ಸಹಜವಾಗಿ ಮುದ್ದು ಮಾಡಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಅರ್ಥೈಸಿ ತೋರಿಸಿದ್ದಾರೆ, ಮುತ್ಯಾನ ಮೇಲೆ ಕೇಸ್ ಆಗಬಾರದಿತ್ತು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಗುವಿನ ತಂದೆ ತಾಯಿನೇ ವಿಡಿಯೋ ಮಾಡಿದ್ದಾರೆ, ಅವರು ಏನಾದರೂ ಕೇಸ್ ಕೊಟ್ಟಿದ್ದಾರಾ. ಇದರಿಂದ ಸಂತ್ರಸ್ತ ಕುಟುಂಬಸ್ಥರ ಪರಿಸ್ಥಿತಿ ಏನಾಬೇಕು, ಸೋಷಿಯಲ್ ಮೀಡಿಯಾ ನೋಡಿ ಕೇಸ್ ಮಾಡಲಾಗಿದೆ, ಮುತ್ಯಾನ ಮೇಲೆ ಎಫ್ ಐ ಆರ್ ಆದ ಮೇಲೂ ಸುದ್ದಿ ಮಾಧ್ಯಮಗಳು ಯಾಕ್ ಸುದ್ದಿ ಮಾಡಿದ್ದೀರಾ ಎಂದ ಸಚಿವ, ದರ್ಶನಾಪುರ ಸಿಡಿದೆದ್ದಿದ್ದಾರೆ.
ಮುತ್ಯಾನ ವಿಡಿಯೋದಲ್ಲಿ ಏನು ಇದೆ ಎಂದು ನೋಡಿ ವಾಸ್ತವ ತಿಳಿಬೇಕಿತ್ತು, ವಿಡಿಯೋ ಕ್ಲಿಪಿಂಗ್‌ನಲ್ಲಿ ಏನು ಇಲ್ಲ,ಅದ್ರೂ ಸುದ್ದಿ ಮಾಡಿದ್ದಾರೆ, ಯಾರಾದರೂ ವಯಸ್ಸು ಇದ್ದ ಮಹಿಳೆಗೆ ಹಿಡಕೊಂಡು ಮಾಡಿದ್ರೆ ಅದು ತಪ್ಪು, ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗದ ವಿರುದ್ಧ ಸಚಿವರು ಗರಂ ಆಗಿದ್ದಾರೆ.
ಇದನ್ನೂ ಓದಿ : ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ಮಳೆ | ಉದ್ವಿಗ್ನಗೊಂಡ ಪಶ್ಚಿಮ ಏಷ್ಯಾ



















