ಕೊಪ್ಪಳ: ಮುಸ್ಲಿಂರ (Muslims) ಮದುವೆ ಹಿಂದೂಗಳಂತೆ ಏಳೇಳು ಜನುಮದ ಅನುಬಂಧವಲ್ಲ. ಅದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಎಂದು ಸಿಎಂ ಆರ್ಥಿಕ ಸಲಹೆಗಾರರ, ಶಾಸಕ ಬಸವರಾಜ್ ರಾಯರೆಡ್ಡಿ (
) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ (Koppala) ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಮುಸ್ಲಿಂರ ಮದುವೆ ನೋಂದಣಿ ಆಗುತ್ತದೆ. ಮುಸ್ಲಿಂರ ಗುರುಗಳು ನೋಂದಣಿ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಬೇಡ ಎಂದರೆ ಬಿಟ್ಟು ಬಿಡುತ್ತಾರೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ (Narendra Modi) ಮುಸ್ಲಿಂರ ಬಗ್ಗೆ ಕೀಳು ಮಟ್ಟದ ರೀತಿಯಲ್ಲಿ ಮಾತನಾಡಬಾರದಿತ್ತು. ಓಬಿಸಿ ಮೀಸಲಾತಿ ತೆಗೆದು, ಮುಸ್ಲಿಂರಿಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜಾತಿ ಗಣತಿ ಅಲ್ಲ. ಇದು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ-ಗತಿ ತಿಳಿಯುವ ಗಣತಿಯಾಗಿದೆ. 2015-16ರಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.
ಗಣತಿಯಲ್ಲಿ ತಪ್ಪು ಇದ್ದರೆ ತಿದ್ದಬಹುದು. ಬ್ರಾಹ್ಮಣ, ಜೈನ ಸೇರಿ ಬಿಟ್ಟರೇ ಉಳಿದೆಲ್ಲರಿಗೂ ಓ.ಬಿ.ಸಿ. ಮೀಸಲಾತಿ ಇದೆ. ಶೇ. 85.1ರಷ್ಟು ಮೀಸಲಾತಿ ನೀಡಬೇಕು ಎಂದು ಆಯೋಗ ಶಿಫಾರಸ್ಸು ಮಾಡಿದೆ. ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ತಂದಿದ್ದಾರೆ. ಜಾತಿ ಆಧಾರಿತ ಮೀಸಲಾತಿಗೂ ಸಂವಿಧಾನದಲ್ಲಿ ಅವಕಾಶ ಇಲ್ಲ. ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗಬಾರದು. ಶೇ.10ರಷ್ಟು ಮೀಸಲಾತಿ ನೀಡಿ ಎಂದು ನಾನು ಒತ್ತಾಯಿಸಿದ್ದೇನೆ ಎಂದಿದ್ದಾರೆ.