ಬ್ರಿಡ್ಜ್‌ಟೌನ್: ಚಾಂಪಿಯನ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಎರಡು ಟಿ20 ವಿಶ್ವಕಪ್ ಜಯಿಸುವ ಮೂಲಕ ಭಾರತದ (Team India) ಪರ ವಿಶಿಷ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
2007ರಲ್ಲಿ ಭಾರತ ಮೊದಲ ಬಾರಿಗೆ ಧೋನಿ (MS Dhoni) ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ 5 ರನ್ ಗಳಿಂದ ಜಯಿಸಿತ್ತು. ಈ ಮೂಲಕ ಪ್ರ ಪ್ರಥಮ ಟಿ20 ಕ್ರಿಕೆಟ್ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಔಟಾಗದೇ 30 ರನ್ (16 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ, 17 ವರ್ಷಗಳ ನಂತರ ರೋಹಿತ್ ನಾಯಕತ್ವದಲ್ಲೇ ಭಾರತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಸತತ ಎರಡು ಬಾರಿ ಚಾಂಪಿಯನ್ ಆದ ತಂಡದಲ್ಲಿದ್ದ ಏಕಮಾತ್ರ ಸದಸ್ಯ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಫೈನಲ್‌ನಲ್ಲಿ 9 ರನ್‌ಗಳಿಸಿ ರೋಹಿತ್ ಔಟ್ ಆಗಿದ್ದರೂ ಫೈನಲ್ ಗೆ ತರುವಲ್ಲಿ ರೋಹಿತ್ ಪಾತ್ರವೇ ಹೆಚ್ಚಾಗಿತ್ತು.