ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ತೆರಳುತ್ತಿದ್ದ ಕಾರು ಕೆಸರು ಗುಂಡಿಯಲ್ಲಿ ಸಿಲುಕಿರುವ ಘಟನೆ ನಡೆದಿದೆ.
ಜಾರ್ಖಂಡ್ನ ಬಹರಗೋರಾದಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಅವರು ಕಾರು ಕೆಸರಿನ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಸಚಿವರು ಸಾರ್ವಜನಿಕ ಸಮಾವೇಶದ ಹಿನ್ನೆಲೆಯಲ್ಲಿ ತೆರಳುತ್ತಿದ್ದರು. ಆದರೆ, ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದವು, ದೊಡ್ಡ ಹೊಂಡಗಳನ್ನು ಸೃಷ್ಟಿಯಾಗಿದ್ದವು. ಆ ಹುಂಡಿಗಳಲ್ಲೇ ಕಾರು ಸಿಲುಕಿಕೊಂಡಿತ್ತು.
ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸಹಾಯ ಮಾಡಲು ಆಗಮಿಸಿದರು. ಕೂಡಲೇ ಚವ್ಹಾಣ್ ಅವರಿಗೆ ಬೇರೆ ಕಾರಿನ ವ್ಯವಸ್ಥೆ ಮಾಡಲಾಯಿತು.