ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ವರದಿ ಕೇಳಿದೆ.
ರಾಜ್ಯದಲ್ಲಿ ನಡೆದಿರುವ ಚಿನ್ನದ ಬಿಸ್ಕೆಟ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ತನಿಖಾ ದಳ, ಡಿಆರ್ ಐ ಹಾಗೂ ಜಾರಿ ನಿರ್ದೇಶನಾಲಯದ ವರದಿ ಕೇಳಿದೆ.
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಯಾರ? ಯಾರ? ಪಾತ್ರವಿದೆ. ಈ ಪ್ರಕರಣದ ತನಿಖೆ ಸದ್ಯ ಎಲ್ಲಿಯವರೆಗೆ ಬಂದಿದೆ?. ತನಿಖೆ ವೇಳೆ ಏನೆಲ್ಲ ಪತ್ತೆಯಾಗಿದೆ?. ಇಲ್ಲಿಯವರೆಗೆ ಎಷ್ಟು ಕೋಟಿ ಚಿನ್ನ ಹಾಗೂ ಹಣ ವಶಪಡಿಸಿ ಕೊಳ್ಳಲಾಗಿದೆ? ಎಂಬುವುದರ ಕುರಿತು ಕೂಡಲೇ ವರದಿ ನೀಡುವಂತೆ ಗೃಹ ಇಲಾಖೆ ಸೂಚಿಸಿದೆ.