ಒಂದಲ್ಲಾ ಎರಡಲ್ಲಾ 3 ವರ್ಷಗಳ ನಿರಂತರ ಹೋರಾಟ. ಹಾವೂ ಸಾಯ್ತಿಲ್ಲ. ಕೋಲೂ ಮುರೀತಿಲ್ಲ. ಹೌದು. ಉಕ್ರೇನ್ ಮಂಡಿಯೂರುತ್ತಿಲ್ಲ..ರಷ್ಯಾ ತಣ್ಣಗಾಗುತ್ತಿಲ್ಲ. ನಿರಂತರ ಸಮರದ ಫಲವಾಗಿ ಉಕ್ರೇನ್ ಆರ್ಥಿಕವಾಗಿ ಕಂಡುಕೇಳರಿಯದ ರೀತಿ ಜರ್ಜರಿತವಾಗಿದೆ. ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಅಧ್ಯಕ್ಷ ಜೆನೆಲ್ ಸ್ಕಿ ಹೊಸ ಹೊಸ ಮಾರ್ಗಗಳನ್ನು ಶೋಧಿಸುತ್ತಲೇ ಸಾಗುತ್ತಿದೆ. ಈ ಪೈಕಿ ಕಂಡುಕೊಂಡಿರುವ ಹೊಸ ಮಾರ್ಗ ನಿಜಕ್ಕೂ ಜಗತ್ತನ್ನೇ ನಿಬ್ಬೆರಗಾಗಿಸಿದೆ.
ನೀಲಿ ಚಿತ್ರ ಉದ್ಯಮದ ಮೊರೆ ಹೋದ ಉಕ್ರೇನ್!
ಅಚ್ಚರಿಯಾದರೂ ಇದು ಸತ್ಯ. ಯುದ್ಧದಿಂದ ತತ್ತರಿಸಿರುವ ದೇಶಕ್ಕೆ ಆರ್ಥಿಕ ಆಕ್ಸಿಜನ್ ನೀಡಲು ಈಗ ಉಕ್ರೇನ್ ಅಧ್ಯಕ್ಷರು ನೀಲಿ ಚಿತ್ರೋದ್ಯಮದ ಮೊರೆ ಹೋಗಿದ್ದಾರೆ. ದೇಶದಲ್ಲಿ ನೀಲಿಚಿತ್ರಗಳ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನಾತ್ಮಕವಾಗಿ ಮಾನ್ಯತೆ ನೀಡಲು ಮುಂದಾಗಿದೆ.
ಯುದ್ಧೋಪಕರಣ ಖರೀದಿಗೆ ನೀಲಿ ಹಣ ಬಳಕೆ!
ಉಕ್ರೇನ್ ನಲ್ಲಿ ನೀಲಿಚಿತ್ರ ವೀಕ್ಷಣೆ, ಪ್ರಸಾರ ಮತ್ತು ಚಿತ್ರೀಕರಣ ಕಾನೂನು ಬಾಹಿರ. ಪ್ರತಿ ವರ್ಷ ಈ ದೇಶದಲ್ಲಿ 1400ಕ್ಕೂ ಹೆಚ್ಚು ಇಂಥಾ ಪ್ರಕರಣಗಳು ದಾಖಲಾಗ್ತಿವೆ. ಇದನ್ನು ಮನಗಂಡಿರೋ ಅಧ್ಯಕ್ಷ ಜೆಲೆನ್ ಸ್ಕಿ ಈ ಉದ್ಯಮದಲ್ಲಿ ಅಡಗಿರೋ ಕೋಟ್ಯಂತರ ಆದಾಯದ ಸದುಪಯೋಗಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿಯೇ ಈ ನೀಲಿ ಉದ್ಯಮಕ್ಕೆ ಕಾನೂನು ಮಾನ್ಯತೆ ನೀಡೋ ಚಿಂತನೆ ನಡೆಸಿದ್ದಾರೆ.
ಈ ಕಾರ್ಯವಾದ್ರೆ ಸರ್ಕಾರಕ್ಕೆ ಪ್ರತಿ ವರ್ಷ ನೂರಾರು ಕೋಟಿ ಆದಾಯ ಬರಲಿದೆ. ಒಂದು ಅಂದಾಜಿನ ಪ್ರಕಾರ ಈ ಹಣದಲ್ಲಿ ಉಕ್ರೇನ್ ಸೇನೆ 24 ಸಾವಿರ ಡ್ರೋನ್ ಗಳನ್ನು ಖರೀದಿಸಬಹುದಾಗಿ. ಉಕ್ರೇನ್ ನ ಈ ನೀತಿ ಬೇರೆ ದೇಶಗಳಲ್ಲಿ ಅದ್ಯಾವಾಗ ಬರುತ್ತೆ ಅಂತಾ ಅದೆಷ್ಟೋ ಮಂದಿ ಯೋಚಿಸೋದಕ್ಕೆ ಶುರುಮಾಡಿದ್ದಾರೆ.