ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾ ಡಿ.20 ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಉಪೇಂದ್ರ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿಯೂ ‘ಯುಐ’ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಉಪ್ಪಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಉಪ್ಪಿ ಹೋದಲ್ಲೆಲ್ಲ ‘ಯುಐ’ ಸಿನಿಮಾದ ಜೊತೆಗೆ ರಜನೀಕಾಂತ್ ಜೊತೆ ನಟಿಸುತ್ತಿರುವ ‘ಕೂಲಿ’ ಸಿನಿಮಾದ ಕುರಿತು ಕೂಡ ಪ್ರಶ್ನೆಗಳು ಏಳುತ್ತಿವೆ. ಈ ವೇಳೆ ಮಾತನಾಡಿರುವ ನಟ ಉಪೇಂದ್ರ, ‘ರಜನೀಕಾಂತ್ ಕುರಿತು ಮಾತನಾಡಲು ಸಮಯ ಸಾಕಾಗುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಸಂದರ್ಶನವನ್ನೇ ಮಾಡಬೇಕು. ಆದರೆ ಅವರ ಬಗ್ಗೆ ಕಿರಿದಾಗಿ ಹೇಳಬೇಕೆಂದರೆ ಅವರಿಗಿರುವ ಜ್ಞಾನ, ಅವರ ಮಾತುಗಳು ಇನ್ನೂ ಸಾಕಷ್ಟು ವಿಷಯಗಳು ಅವರನ್ನು ನನ್ನ ಪಾಲಿನ ದ್ರೋಣಾಚಾರ್ಯರನ್ನಾಗಿ ಮಾಡಿದೆ ಎಂದಿದ್ದಾರೆ.
ಉಪೇಂದ್ರ ಅವರು ರಜನೀಕಾಂತ್ ಅವರಿಗೆ ತಮ್ಮ ಗುರುವಿನ ಸ್ಥಾನ ನೀಡಿದ್ದಾರೆ. ಉಪೇಂದ್ರ ಅವರು ಈ ಹಿಂದೆ ಕೆಲವು ಬಾರಿ ರಜನೀಕಾಂತ್ ಅನ್ನು ಭೇಟಿಯಾಗಿದ್ದಾರೆ.
ಉಪೇಂದ್ರ ಬಹಳ ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದು, ಅವರೇ ನಿರ್ದೇಶಿಸಿರುವ ‘ಯುಐ’ ಸಿನಿಮಾ ಡಿ. 20ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರವು ಟ್ರೈಲರ್ ಗಳಿಗಾಗಿ ಗಮನ ಸೆಳೆದಿದೆ.