ರಾಯಚೂರು : ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೂಲ ರಾಮದೇವರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ತೈಲ ಅಭ್ಯಂಗನ ನೆರವೇರಿಸಿದರು. ಇದೇ ವೇಳೆ ತುಳಸಿ ಪೂಜೆ, ಗೋ ಪೂಜೆ ಮಾಡಲಾಯಿತು.
ಮಂತ್ರಾಲಯದ ಶ್ರೀ ಮಠದಲ್ಲಿ ಪ್ರಾಣದೇವರು, ರಾಯರು ಮತ್ತು ಇತರ ಬೃಂದಾವನಗಳಿಗೂ ತೈಲ ಅಭ್ಯಂಗನ ಮತ್ತು ಆರತಿಯನ್ನು ಅರ್ಪಿಸಲಾಯಿತು. ನಂತರ ಸುಬುಧೇಂದ್ರ ತೀರ್ಥ ಶ್ರೀಗಳಿಗೆ ತೈಲ ಅಭ್ಯಂಗನ ಹಾಗೂ ನಾರೀಕೃತ ನೀರಾಜನ ನೆರವೇರಿತು.
ಈ ವೇಳೆ ಶ್ರೀಗಳು ಎಲ್ಲಾ ಭಕ್ತರಿಗೆ ಹೊಸ ವರ್ಷದ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಯುಗಾದಿ ಹಿನ್ನೆಲೆ ರಾಯರ ದರ್ಶನ ಪಡೆಯಲು ವಿವಿಧೆಡೆಯಿಂದ ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರೀತಿ ಹೆಸರಿನಲ್ಲಿ ವಂಚನೆ – ಬ್ರೇನ್ ಟ್ಯೂಮರ್ ಎಂದು ಸುಳ್ಳು ಹೇಳಿ ಲಕ್ಷ ಲಕ್ಷ ಹಣ ದೋಚಿದ ಪ್ರಿಯಕರ!



















