ಉಡುಪಿ : ಮಂದಾರ್ತಿ ಮೇಳದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣ ತೆಗೆಯುವ ಮೊದಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ ಮಧ್ಯ ರಾತ್ರಿ ಕುಂದಾಪುರ ತಾಲ್ಲೂಕಿನಲ್ಲಿ ನಡೆದಿದೆ.

ಮಂದಾರ್ತಿ 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಈಶ್ವರ ಗೌಡ ಅವರು, ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಕೂಡಲೇ ಎಚ್ಚೆತ್ತ ಸಹಕಲಾವಿದರು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಈಶ್ವರ ಗೌಡ ಇಹಲೋಕ ತ್ಯಜಿಸಿದ್ದರು.
ಇದನ್ನೂ ಓದಿ : ಕುಂದಾಪುರದಲ್ಲೊಂದು ‘ಕಾರ್ಟೂನ್ ಹಬ್ಬ’.. ಲಾಠಿ, ಬಂದೂಕು ಹಿಡಿಯುತ್ತಿದ್ದ ಕೈಗಳಿಗೆ ಬಣ್ಣದ ಕಡ್ಡಿ!



















