ಉಡುಪಿ: ಉಡುಪಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸೇತುವೆ, ಅಂಡರ್ ಪಾಸ್ ನಂತಹ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುವುತ್ತಿದ್ದು, ಇದರಿಂದ ಜನರ ಜೀವನ ಹೈರಾಣಾಗಿದೆ. ಹಾಗೆಯೇ, ಜಿಲ್ಲೆಯ ಇಂದ್ರಾಳಿ ಸೇತುವೆ, 7 ವರ್ಷಗಳ ನಿರಂತರ ಹೋರಾಟಗಳ ಬಳಿಕ 2025ರಲ್ಲಿ ಜನಸಂಚಾರಕ್ಕೆ ಮುಕ್ತವಾಗಿದೆ. ಇದರೊಂದಿಗೆ ಸಂತೆಕಟ್ಟೆ ಅಂಡರ್ ಪಾಸ್‌ನಲ್ಲಿ ನೆಡೆಯುತ್ತಿರುವ ಆಮೆಗತಿಯ ಕಾಮಗಾರಿಯಿಂದ ಜನ ಬೇಸತ್ತು ಹೋಗಿದ್ದಾರೆ.
ಸರಿ ಸುಮಾರು ಮೂರಕ್ಕೂ ಅಧಿಕ ವರ್ಷಗಳಿಂದ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ನೆಡೆಯುತ್ತಲೇ ಇದೆ. ಅಸಲಿಗೆ ಇದು ಯಾವೂದೋ ಗ್ರಾಮೀಣ ಪ್ರದೇಶದಲ್ಲಿ ನೆಡೆಯುತ್ತಿರುವ ಕೆಲಸವಲ್ಲ. ಪ್ರಮುಖ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ. ಈ ಅವ್ಯವಸ್ಥೆಯ ಕುರಿತು ಜನಪ್ರತಿನಿಧಿಗಳು ಸಭೆಗಳ ಮೇಲೆ ಸಭೆಗಳು ನೆಡೆಸುತ್ತಿದ್ದಾರೆ. ಗಡುವುಗಳ ಮೇಲೆ ಗಡುವುಗಳನ್ನು ನೀಡುತ್ತಿದ್ದಾರೆ. ಆದರೆ ಅಂಡರ್ ಪಾಸ್ ಕಾಮಗಾರಿ ಮಾತ್ರ ಅಂತ್ಯ ಕಾಣುತ್ತಿಲ್ಲ.
ಜನಪ್ರತಿನಿಧಿಗಳು ಈ ವರ್ಷದ ಜನವರಿಯಲ್ಲಿ ಕಾಮಗಾರಿ ಮುಗಿಸಿಕೊಡಿ ಎಂದು ಅಧಿಕಾರಿಗಳಿಗೆ ಗಡುವು ಕೊಟ್ಟಿದ್ದರು, ನಂತರ ಮಾರ್ಚ್ ನ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ಮತ್ತೆ ಗಡುವು ನೀಡಿದ್ದರು. ಆದರೆ 2025 ರ ವರ್ಷ ಮುಗಿಯುತ್ತಾ ಬಂದ್ದರು ಕೂಡ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಂಡಿಲ್ಲ.
ಸರ್ವಿಸ್ ರಸ್ತೆಯಲ್ಲಿಲ್ಲ ಸುರಕ್ಷಿತ ವ್ಯವಸ್ಥೆ
ಜನರ ಓಡಾಟಕ್ಕೆ ಸರ್ವಿಸ್ ರಸ್ತೆ ಮುಕ್ತವಾಗಿದ್ದರೂ ಕೂಡ ಅಲ್ಲಿ ಸುರಕ್ಷಿತ ವ್ಯವಸ್ಥೆಗಳ ಕೊರತೆ ಉಂಟಾಗಿದೆ. ಶಾಲಾ ಮಕ್ಕಳು, ಮಹಿಳೆಯರೂ ತಿರುಗಾಡುವಂತಹ ರಸ್ತೆಯ ಬದಿಯಲ್ಲಿ ಸಮರ್ಪಕ ತಡೆಗೋಡೆಯನ್ನು ನಿರ್ಮಿಸಿಲ್ಲ.ಇನ್ನೂ ಈ ಕಾಮಗಾರಿ ಪ್ರಾರಂಭವಾದಾಗಿನಿಂದ ಓಡಾಟಕ್ಕೆ ಸಮರ್ಪಕ ರಸ್ತೆಯಿಲ್ಲದೆ, ದಿನನಿತ್ಯ ಧೂಳುಗಳನ್ನು ತಿಂದು ಅಲ್ಲಿನ ವ್ಯಾಪಾರಸ್ಥರು, ಆಟೋ ಚಾಲಕರು ಕಷ್ಟದ ಜೊತೆ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಈ ಕುರಿತಂತೆ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ನಮಗೆ ಮುಕ್ತಿ ನೀಡಿ ಎಂದು ಸಂತೆಕಟ್ಟೆ ಆಟೋ ಯೂನಿಯನ್ ಅಧ್ಯಕ್ಷ ಜಯರಾಂ ಆಗ್ರಹಿಸಿದ್ದಾರೆ.
ಇನ್ನು ಕಾಮಗಾರಿ ಪ್ರಾರಂಭವಾಗಿ ವರ್ಷಗಳೂ ಕಳೆದಿವೆ. ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ನಿದ್ರೆಗೆ ಜಾರಿದ್ದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಂದಿನ ಮೂರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ತುಳು ನಾಡ ರಕ್ಷಣಾ ವೇದಿಕೆ ಉಡುಪಿ ಸಂಘಟನೆಯವರು ಕರೆ ನೀಡಿದ್ದಾರೆ.
ಇಲ್ಲಿ ಕುಂಟುತ್ತಾ ಸಾಗಿದ ಕಾಮಗಾರಿಯ ವೈಫಲ್ಯಕ್ಕೆ ಹಾಲಿ ಶಾಸಕರು, ಸಂಸದರ ಜೊತೆಗೆ ಮಾಜಿ ಶಾಸಕ, ಸಂಸದರು ಕೂಡ ನೇರ ಹೊಣೆ ಹೊರಬೇಕಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕೆರೆಯಲ್ಲಿ ಮೀನು ಹಿಡಿಯಲು ಹೋದ ಮಹಿಳೆಗೆ ವಿದ್ಯುತ್ ಸ್ಪರ್ಶಿಸಿ ಮೃತ



















