ತಾಪಮಾನ ಏರಿಕೆಯಿಂದಾಗಿ ಕಡಲ ತೀರದ ಮೀನುಗಾರರು ಸಂಕಷ್ಟ ಪಡುವಂತಾಗಿದೆ. ಈಗ ರಾಜ್ಯದ ಬಹುತೇಕ ಕಡೆ ತಾಪಮಾನ 40 ಡಿಗ್ರಿ ಆಸುಪಾಸಿನಲ್ಲಿದೆ. ಹೀಗಾಗಿ ಕಡಲ ತೀರವೂ ಇದಕ್ಕೆ ಹೊರತಲ್ಲ. ಮಂಗಳೂರು, ಮಲ್ಪೆ, ಗಂಗೊಳ್ಳಿ ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದ ಸ್ಥಿತಿ ನಿರ್ಮಾಣವಾಗಿದೆ.
ಆಗಸ್ಟ್ ನಿಂದ ಆರಂಭವಾಗುವ ಮೀನುಗಾರಿಕೆ ಡಿಸೆಂಬರ್ ಜನವರಿಯಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ.. ಫೆಬ್ರವರಿ, ಮಾರ್ಚ್ ತಿಂಗಳಲ್ಲಿಎರಡನೇ ಹಂತದಲ್ಲಿ ಮೀನುಗಾರಿಕೆಗೆ ಸುಗ್ಗಿ ಕಾಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ನಾಡದೋಣಿಗಳಿಗೆ ಮೀನು ಸಿಗುತ್ತಿಲ್ಲ. ಆಳಸಮುದ್ರದ ಬೋಟ್ ಗಳಿಗೆ ತಾಪಮಾನ ಹೊಡೆತ ನೀಡಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದೆ ಚಿಂತಾಕ್ರಾಂತರಾಗಿದ್ದಾರೆ.
ತಾಪಮಾನ ಹೆಚ್ಚಾಗಿದ್ದರಿಂದಾಗಿ ಬಹುತೇಕ ಮೀನುಗಾರಿಕಾ ದೋಣಿಗಳು ತೀರದಲ್ಲಿ ಲಂಗರು ಹೂಡಿವೆ. ಆಳ ಸಮುದ್ರದ ಟ್ರಾಲರ್ ಗಳಲ್ಲಿ ಹಿಂದೆ 12 ದಿನಗಳ ಕಾಲ ಉಳಿಯುತ್ತಿದ್ದ ಐಸ್ ಬ್ಲಾಕ್ ಗಳು ಈಗ 7-8 ದಿನಗಳಲ್ಲೇ ಕರಗುತ್ತಿವೆ. ಹೀಗಾಗಿ ಬೋಟ್ ಗಳು ಕೂಡ ಬೇಗ ಬೇಗ ದಡಕ್ಕೆ ಬರುತ್ತಿವೆ. ಹೀಗಾಗಿ ಮೀನು ದರ ಕೂಡ ಏರಿಕೆಯಾಗುತ್ತಿದೆ.