ಉಡುಪಿ: ತಾಯಿಯೇ ಮಗಳನ್ನುಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮದಲ್ಲಿ ನೆಡೆದಿದೆ.
ಶಿಫನಾಜ್(17) ತಾಯಿಯ ಕೋಪಕ್ಕೆ ಬಲಿಯಾದ ಬಾಲಕಿ.
ಸೆ.20 ರಂದು ಶಿಫನಾಜ್ ತನ್ನ ಸ್ನೇಹಿತ ಸಲೀಂನನ್ನು ಭೇಟಿಯಾಗಲು ಉಡುಪಿಗೆ ಹೋಗುವುದಾಗಿ ತಾಯಿಗೆ ತಿಳಿಸಿದ್ದಳು. ಈ ವಿಚಾರವಾಗಿ ತಾಯಿ ಗುಲ್ಜಾರ್ ಬಾನು (45) ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ.
ನೀನು ನನ್ನ ಮರ್ಯಾದೆಯನ್ನು ತೆಗೆಯುತ್ತಿದ್ದೀಯಾ ಸ್ನೇಹಿತನನ್ನು ಭೆಟಿ ಮಾಡವಂತಿಲ್ಲ ಎಂದು ತಾಯಿ ಹೇಳಿದಾಗ ಜಗಳ ತೀವೃಗೊಂಡಿದೆ. ಶಿಫನಾಜ್ ತನ್ನ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿದಾಗ ಸಿಟ್ಟಿಗೆದ್ದ ತಾಯಿ ಮಗಳ ಬಾಯಿಗೆ ಬಟ್ಟೆ ತುರುಕಿ, ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆಮಾಡಿದ್ದಾಳೆ.
ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ತಂದೆ ಶೇಖ್ ಮುಸ್ತಫಾ ದೂರು ದಾಖಲಿಸಿದ್ದರು.
ತಾಯಿ ಮಗಳ ನಡುವೆ ಜಗಳ ಉಂಟಾಗಿ ಮನನೊಂದು ಮಗಳು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ದಾಖಲಾಗಿತ್ತು. ನಂತರ ಮರಣೋತ್ತರ ಪರೀಕ್ಷೇಯಲ್ಲಿ ಸಾವಿನ ನಿಜಾಂಶ ಬಯಲಾಗಿದ್ದು, ಶಿಫನಾಜ್ ಆತ್ಮಹತ್ಯೆ ಮಾಡಿಕೊಳ್ಳದೆ ಉಸಿರುಗಟ್ಟಿಸಿ ಕೊಲೆಯಾಗಿರುವುದು ದೃಢಪಟ್ಟಿದೆ.
ಫೋಲಿಸರು ಗುಲ್ಜಾರ್ ಭಾನು ಅವರನ್ನು ವಶಕ್ಕೆ ಪಡೆದು ತನಿಖೆ ನೆಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.