ಉಡುಪಿ : ಟ್ರೇಡಿಂಗ್ ಅಪ್ಲಿಕೇಶನ್ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ ಎಂದು ವಂಚಿಸಿದ ಘಟನೆ ಉಡುಪಿಯಲ್ಲಿ ನೆಡೆದಿದೆ.
ದೊಡ್ಡಣಗುಡ್ಡೆ ನಿವಾಸಿ ಬಿ.ಎಂ.ಯಕ್ಕರನಾಳ ಲಕ್ಷ ಲಕ್ಷ ಹಣ ಕಳೆದುಕೊಂಡ ವಂಚನೆಗೊಳಗಾದ ವ್ಯಕ್ತಿ. ಜೂನ್ 27 ರಿಂದ ಜುಲೈ 16 ರವರೆಗೆ ಆರೋಪಿಗಳು ಸೂಚಿಸಿದ ಬ್ಯಾಂಕ್ ಗಳಿಗೆ ಸುಮಾರು ೩ಲಕ್ಷ ಹಣವನ್ನು ಕಳುಹಿಸಿದ್ದು, ಮೂಲ ಹಣವಾಗಲಿ ಲಾಭಾಂಶವಾಗಲಿ ಹಿಂದಿರುಗಿ ಬಂದಿಲ್ಲ. ಗಲಿಬಿಲಿಗೊಂಡ ವ್ಯಕ್ತಿ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು, ಲೋಕಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸೈಬರ್ ಕ್ರೈಂ ವಿಚಾರವಾಗಿ ಮಾಹಿತಿ ನಿಡಿದ ಗೃಹ ಖಾತೆ, ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ”ಕಳೆದ ವರ್ಷ ದೇಶಾದ್ಯಂತ ಸೈಬರ್ ವಂಚನೆಗಳಿಂದಾಗಿ 22,845.73 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 2023ಕ್ಕೆ ಹೋಲಿಸಿದರೆ 206% ಹೆಚ್ಚಳವಾಗಿರುವುದು ಕಂಡುಬಂದಿರುತ್ತದೆ. CFCFRMS ಪ್ರಕಾರ ಇದುವರೆಗೆ ದಾಖಲಾಗಿರುವ 17.82 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ 5,489 ಕೋಟಿ ರೂ.ಗಳನ್ನು ವಂಚಕರಿಂದ ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.



















