ಉಡುಪಿ : ಉಡುಪಿಯಲ್ಲಿ ಚಿರತೆ ಹಾವಳಿ ಜೋರಾಗಿದೆ. ಈಗಾಗಲೇ ಮನೆಯ ಆವರಣದಲ್ಲಿ, ತೋಟದಲ್ಲಿ ಚಿರತೆ ಓಡಾಡಿದ ವಿಡಿಯೋಗಳು ಜನರನ್ನ ಆತಂಕ್ಕೀಡು ಮಾಡಿತ್ತು. ಇದೀಗ ಜಿಲ್ಲೆಯ ಆತ್ರಾಡಿ ಸಮೀಪದ ಕಬ್ಯಾಡಿಯಲ್ಲಿ ಚಿರತೆಯೊಂದು ಕಾಂಪೌಂಡ್ ಏರಿ ಕುಳಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಬ್ಯಾಡಿಯ ಬಾಲಕೃಷ್ಣ ನಾಯಕ್ ಎಂಬುವವರ ಕಾಂಪೌಂಡ್ ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಶುಭಕರ್ ಶೆಟ್ಟಿ ಅವರು ಚಿರತೆಯನ್ನ ನೋಡಿದ್ದು, ಅವರು ತಮ್ಮ ಮೊಬೈಲ್ ನಲ್ಲಿ ಚಿರತೆ ಕಾಂಪೌಂಡ್ ನಲ್ಲಿ ಸಂಚರಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಸದ್ಯ ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲು ಸಿದ್ದತೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಹಾವೇರಿ | ನಾಡ ಬಾಂಬ್ ಸ್ಟೋಟ ; 2 ಹೋರಿಗಳು ಸಾವು



















