ಉಡುಪಿ | ವಿದ್ಯಾರ್ಥಿಗಳ ಗುಂಪೊಂದು ಕುಡಿದು, ನಡುರಸ್ತೆಯಲ್ಲೇ ಪಟಾಕಿ ಸಿಡಿಸಿ ಅಶಾಂತಿ ಉಂಟು ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ.
ಕೇರಳದಿಂದ ಉಡುಪಿ ಕಡೆ ಪ್ರವಾಸಕ್ಕಾಗಿ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಬಂದಿದ್ದು, ಹೆಜಮಾಡಿ ಟೋಲ್ ಗೇಟ್ ಬಳಿ ಬಸ್‌ಗಳನ್ನು ನಿಲ್ಲಿಸಿ ಮದ್ಯ ಸೇವನೆ ಮಾಡಿದಲ್ಲದೆ, ಜೋರಾಗಿ ಹಾಡು ಹಾಕಿಕೊಂಡು ನಡುರಸ್ತೆಯಲ್ಲೇ ಪಟಾಕಿ ಸಿಡಿಸಿ ಡಾನ್ಸ್ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಹುಚ್ಚಾಟ ಮತ್ತು ಪುಂಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಭಾರತದಲ್ಲಿ ಟೆಸ್ಲಾ ಅಬ್ಬರ | ಪೆಟ್ರೋಲ್, ಡೀಸೆಲ್ ಕಾರು ವಿನಿಮಯಕ್ಕೆ 3 ಲಕ್ಷ ರೂ.ವರೆಗೆ ಭರ್ಜರಿ ಆಫರ್ ಘೋಷಣೆ!



















