ಉಡುಪಿ: ಉಡುಪಿ ತಾಲೂಕು ಮಣಿಪುರ ಗ್ರಾ.ಪಂ. ವ್ಯಾಪ್ತಿಯ ಮರ್ಣಿ ಗ್ರಾಮದಲ್ಲಿ ಬಸ್ ತಂಗುದಾಣವೊಂದು ಆಕರ್ಷಕ ಚಿತ್ತಾರಗಳಿಂದ ಗಮನ ಸೆಳೆಯುತ್ತಿದೆ. ಬಹಳಷ್ಟು ಸ್ವಚ್ಛತೆಯಿಂದ ಕೂಡಿದ್ದು, ತುಳುನಾಡ ಸಂಪ್ರದಾಯ ಸಂಸ್ಕೃತಿಯನ್ನು ಬಿಂಬಿಸುವ ವರ್ಲಿ ಚಿತ್ತಾರವು ಮನಸೂರೆಗೊಳ್ಳುತ್ತಿದೆ.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಅವರು ತಮ್ಮ ಪುತ್ರಿ ಅನಘ ಮರ್ಣೆಯ ಆರನೇಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಪಾಳು ಬಿದ್ದ ಬಸ್ ತಂಗುದಾಣವನ್ನು ಸ್ವತಃ ಸ್ವಚ್ಛಗೊಳಿಸಿ ಮೂರು ದಿನಗಳ ಪರಿಶ್ರಮದಿಂದ, ತನ್ನ ವಿದ್ಯಾರ್ಥಿ ಕಲಾವಿದರಾದ ಶ್ರೇಯಸ್ ಮತ್ತು ಸಂಜನಾ ಅವರ ಜತೆ ಸೇರಿಸಿಕೊಂಡು ಮರ್ಣೆಯ ಬಸ್ ತಂಗುದಾಣಕ್ಕೆ ವರ್ಲಿ ಬಣ್ಣಗಳ ಚಿತ್ತಾರ ಬಿಡಿಸಿದ್ದಾರೆ.
ಇವರ ಈ ವಿಶಿಷ್ಟ ರೀತಿಯ ಹುಟ್ಟುಹಬ್ಬದ ಸಂಭ್ರಮಾಚಾರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಉಡುಪಿ | ತಾಳಮದ್ದಲೆ ಕಲಾವಿದರಿಗೆ ಅಪಮಾನ.. ವಿಶ್ವೇಶ್ವರ ಭಟ್ ಕ್ಷಮೆ ಯಾಚಿಸುವಂತೆ ಆಗ್ರಹ



















