ಉಡುಪಿ ಕೃಷ್ಣ ಮಠದ ಪರ್ಯಾಯ ಮಹೋತ್ಸವವನ್ನು ನಾಡಹಬ್ಬ ದಸರಾದಂತೆ ಆಚರಿಸುವ ಸಲುವಾಗಿ ಉಡುಪಿ ನಗರ ಸಭೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಯನ್ನು ವಿದ್ಯುತ್ ದೀಪಗಳಲ್ಲಿ ಅಲಂಕರಿಸಲಾಗುವುದು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಅಲ್ಲದೇ, ಈ ಬಾರಿಯಿಂದ ಮುಂದಿನ ಎಲ್ಲಾ ಪರ್ಯಾಯಕ್ಕೂ ಉಡುಪಿ ನಗರಸಭೆಯಿಂದ ಅನುದಾನ ಮೀಸಲಿಡಲಾಗುವುದು. ಪರ್ಯಾಯಕ್ಕೆ ದೇಶ ವಿದೇಶದಿಂದ ಭಕ್ತಾದಿಗಳು ಆಗಮಿಸುವುದರಿಂದ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರಕ್ಕೆ 25 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.