ಉಡುಪಿ : ಎಕೆಎಂಎಸ್ ಬಸ್ ಮಾಲೀಕ ಸೈಫುದ್ದಿನ್ (47) ನನ್ನು ಇಂದು ಬೆಳಿಗ್ಗೆ ಸರಿ ಸುಮಾರು 11ಗಂಟೆಯ ವೇಳೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ.
ಪ್ರಾಥಮಿಕ ಹಂತದ ತನಿಖೆಯ ಪ್ರಕಾರ ತನ್ನದೇ ಕಂಪನಿಯ ಬಸ್ ಡ್ರೈವರ್ ಗಳಿಂದ ಹತ್ಯೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಣಿಪಾಲ ದಲ್ಲಿ ಸೈಪುದ್ದಿನ್ ಮೂಲ ಮನೆಯಿದ್ದು, ಕೊಡವೂರಿನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು.
ಇಂದು ಕೊಡವೂರಿನ ಮನೆಯಲ್ಲಿ ಒಬ್ಬರೇ ಇದ್ದಾಗ ತನ್ನದೇ ಸಂಸ್ಥೆಯ ಮೂವರು ಉದ್ಯೋಗಿಗಳು ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿ ಹತ್ಯೆ ಗೈದಿದ್ದಾರೆ.
ಇನ್ನು ಈ ಕುರಿತು ಉಡುಪಿ ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಮಾತನಾಡಿ ಕೊಲೆಯಾದ ಸೈಫುದ್ದಿನ್ ವಿರುದ್ಧ ಸುಮಾರು 18 ಪ್ರಕರಣಗಳು ದಾಖಲಾಗಿದ್ದು, ಉಡುಪಿ ಮತ್ತು ಮಲ್ಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.