ಉಡುಪಿಯಲ್ಲಿ 14 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಶೇಷ ಚೇತನ ಬಾಲಕನನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಉಡುಪಿ ಸಂತೆಕಟ್ಟೆಯಲ್ಲಿರುವ ಶ್ರೀ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂತೋಷ್(12) ಎಂಬ ಬುದ್ದಿಮಾಂದ್ಯಾ ಬಾಲಕ 2011 ರ ಫೆಬ್ರವರಿ 23 ರಂದು ರಾತ್ರಿ ಕಾಣೆಯಾಗಿದ್ದನು.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನೆಡೆಸಿದಾಗ, ಪ್ರಸ್ತುತ ಕಾರ್ಕಳದಲ್ಲಿರುವ ವಿಜೇತ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ 2018ರಿಂದ ಆಶ್ರಯ ಪಡೆದಿರುವ ಬಿಪಿನ್ ಎನ್ನುವಂತಹ ಹುಡುಗ,ಕಾಣೆಯಾಗಿದ್ದ ಸಂತೋಷನಿಗೆ ಹೋಲಿಕೆಯಾಗಿರುವುದು ಕಂಡುಬಂದಿದೆ.
ದೂರುದಾರೆ ಮೆರಿನ ಎಲಿಜೆಬೆತ್ ಹಾಗೂ ಸಂತೋಷ್ ಕಾಣೆಯಾದ ಸಮಯದಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಸಿಬ್ಬಂದಿ ಶಾಂತಿ, ವಿಜೇತ ವಿಶೇಷ ಚೇತನ ಮಕ್ಕಳ ಶಾಲೆಗೆ ತೆರಳಿ ನೋಡಿದಾಗ ಈತನೇ ಸಂತೋಷ್ ಎನ್ನುವಂತದ್ದು ದೃಢವಾಗಿದೆ.
ಈ ಪತ್ತೆ ತಂಡದಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ,ಎಸ್ಐ ಗಳಾದ ಸುದರ್ಶನ್ ದೊಡ್ಡ್ ಮನಿ ಹಾಗೂ ಈರಣ್ಣ ಶಿರಗುಂಪಿ, ಸಿಬ್ಬಂದಿಗಳಾದ ಚೇತನ್, ಇಮ್ರಾನ್,ಸಂತೋಷ್, ಹಿರೇಮಠ್ ಇದ್ದರು.