ಉಡುಪಿ :ಜಿಲ್ಲೆಯ ಕಾಪು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ ಬ್ಯಾನರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಬ್ಯಾನರ್‌ನಲ್ಲಿ ಫೆಬ್ರವರಿ 30 ಎಂದು ಮುದ್ರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ಉದ್ಯೋಗ ಖಾತ್ರಿಯ ಹಕ್ಕನ್ನು ರಕ್ಷಿಸಲು ಹಾಗೂ ಅದರ ಮೂಲ ಸ್ವರೂಪವನ್ನು ಮರುಸ್ಥಾಪಿಸುವಂತೆ ಆಗ್ರಹಿಸಲು ರಾಷ್ಟ್ರವ್ಯಾಪ್ತಿ ನರೇಗಾ ಬಚಾವ್ ಸಂಗ್ರಾಮ ನೆಡೆಯುತ್ತಿದೆ. ಅದರಂತೆ ಜ.27ರಿಂದ ಫೆ. 6ರವರೆಗೆ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ತಾಲೂಕು ಮಟ್ಟದಲ್ಲಿ 5ರಿಂದ 10ಕಿ.ಮೀ.ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಜನವರಿ 30 ರಂದು ಬೃಹತ್ ಹೋರಾಟ ನೆಡೆಸಲು ಆಯೋಜನೆ ಮಾಡಿತ್ತು. ಆದರೆ ಅಳವಡಿಸಿದ ಬ್ಯಾನರ್ ನಲ್ಲಿ ಫೆಬ್ರವರಿ 30 ಎಂದು ಮುದ್ರಣವಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ; ಕುಡಿದ ಮತ್ತಲ್ಲಿ ‘ರಂಗೀಲಾ ಡ್ಯಾನ್ಸ್’ | ಹಾಸ್ಟೆಲ್ ಅಡುಗೆ ಸಿಬ್ಬಂದಿ ಅಮಾನತು



















