ಉಡುಪಿ: 13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕನನ್ನು ಪೊಲೀಸರು ಪತ್ತೆಹಚ್ಚಿರುವ ವಿಶೇಷ ಘಟನೆ ಉಡುಪಿಯಲ್ಲಿ ನೆಡೆದಿದೆ.
2012 ರಲ್ಲಿ ಕಾಣೆಯಾಗಿದ್ದ ಯುವಕ ಅನಂತ ಕೃಷ್ಣ ಪ್ರಭು ಇವರನ್ನು ಬೆಂಗಳೂರಿನಲ್ಲಿ ಪೊಲೀಸರು ಪತ್ತೆ ಹಚ್ಚಿ, ನಿಗೂಢ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ.
ಅದು 2012 ಪ್ರಭಾಕರ್ ಪ್ರಭು ಅವರ ಪುತ್ರ ಅನಂತ ಕೃಷ್ಣ ಪ್ರಭು(16) ಪ್ರಥಮ ಪಿಯುಸಿ ಓದುತ್ತಿದ್ದ. ತಾನು ಫೇಲಾಗಿದ್ದನ್ನು ಮನೆಯಲ್ಲಿ ತಿಳಿಸಲು ಹೆದರಿದ್ದ ಅನಂತ ಕೃಷ್ಣ 6/12/2012 ರಂದು ದೇವಸ್ಥಾನಕ್ಕೆ ಹೋಗುತ್ತೇನೆಂದು ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಮಗ ಮನೆಗೆ ಬಾರದ್ದನ್ನು ಕಂಡ ತಂದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಅನಂತ ಕೃಷ್ಣ ಪ್ರಭು(29) ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವುದನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.
ಅನಂತ ಕೃಷ್ಣ ಪ್ರಭು ಬೆಂಗಳೂರಿಗೆ ತೆರಳಿದ ಮೇಲೆ ಅವರಿವರ ಸಹಾಯದಿಂದ ವಿದ್ಯಾಭ್ಯಾಸ ಮುಗಿಸಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹೊಸ ಮನೆ,ಕಾರನ್ನು ಖರೀದಿಸಿ ತನ್ನ ಕುಟುಂಬವನ್ನ ಭೇಟಿ ಮಾಡುವ ಯೋಜನೆಯಲ್ಲಿದ್ದರು. ಆದರೆ ಇದೀಗ ವಿಶೇಷ ತನಿಖಾ ತಂಡ ಅನಂತ ಪ್ರಭುವನ್ನ ಪತ್ತೆ ಹಚ್ಚಿ 13 ವರ್ಷಗಳ ಹಿಂದಿನ ಪ್ರಕರಣಕ್ಕೆ ಅಂತ್ಯಹಾಡಿದ್ದಾರೆ.
ಇನ್ನೂ ವಿಶೇಷ ತನಿಖಾ ತಂಡದಲ್ಲಿ ಪ್ರಭು ಡಿ ಟಿ, ಡಿಎಸ್ಪಿ, ಉಡುಪಿ ಉಪವಿಭಾಗ, ಸುದರ್ಶನ್ ದೊಡ್ಡಮನಿ ಪಿಎಸ್ಐ ಬ್ರಹ್ಮಾವರ ಈರಣ್ಣ ಶಿರಗುಂಪಿ ಪಿಎಸ್ಐ ಉಡುಪಿ ಸಿಟಿ, ಹೆಡ್ ಕಾನ್ಸ್ಟೇಬಲ್ ಇಮ್ರಾನ್,ಚೇತನ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ದೇವಾಡಿಗ ಮತ್ತು ಮಲ್ಲಯ್ಯ ಹಿರೇಮಠ ಕಾರ್ಯನಿರ್ವಹಿಸಿದ್ದಾರೆ.