ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದ 13 ಮೂರನೇ ಪ್ಲೋರ್‌ನಿಂದ ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ಸರ್ಜಾಪುರ ರಸ್ತೆಯ ಬೆಳ್ಳಂದೂರಿನಲ್ಲಿ ನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳ ಮೂಲದ ಅಮೀರ್ ಹುಸೇನ್ (33), ಮುಮ್ತಾಜ್ ಅಲಿ ಮೊಲ್ಲಾ (28) ಎಂದು ಗುರುತಿಸಲಾಗಿದೆ. ಬೆಳ್ಳಂದೂರಿನಲ್ಲಿರುವ ಡಿಎನ್‌ಆರ್ ಅರಿಸ್ಟಾ ಎಂಬ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು, ನಿನ್ನೆ ಸಂಜೆ ಸುಮಾರಿಗೆ 13ನೇ ಪ್ಲೋರ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಮಾಹಿತಿಗಳ ಪ್ರಕಾರ, ಇಂಪ್ರಿಯಲ್ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಟ್ಟಡದ ಕಸ್ಟ್ರಕ್ಷನ್ ಮಾಡುತ್ತಿತ್ತು. ಸದ್ಯ ಇಂಪೀರಿಯಲ್ ಬಿಲ್ಡ್ ಟೆಕ್ ಕಂಪನಿ ಅಧಿಕಾರಿಗಳು ಮತ್ತು ಸೈಟ್ ಎಂಜಿನಿಯರ್‌ಗಳ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 6 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.