ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಜನರಿಗೆ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ರಾಜಸ್ಥಾನಕ್ಕೆ ತೆರಳುವ ಮುನ್ನಾ ಮಾಧ್ಯಮಗಳ ಮುಂದೆ ಮಾತನಾಡಿದ ಡಿಕೆಶಿ, ಯಾರೂ ಕೂಡ ಆರೋಪ ಮಾಡುತ್ತಿಲ್ಲ. ಜನರಿಗೆ ಗೊತ್ತಿದೆ. ಕೇವಲ ವಿಪಕ್ಷಗಳು ಹಾಗೂ ಮಾಧ್ಯಮದಲ್ಲಿ ಮಾತ್ರ ಗ್ಯಾರೆಂಟಿಗಳು ತಲುಪುತ್ತಿಲ್ಲ ಎಂದು ವರದಿ ಆಗುತ್ತಿದೆ. ಎರಡ್ಮೂರು ತಿಂಗಳ ಹಣ ಒಟ್ಟಿಗೆ ಬಿಡುಗಡೆ ಆಗಲಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.