ಮಧುಗಿರಿಯ ಸಹಕಾರ ಸಂಘಗಳ ಉಪ ನಿಬಂಧಕ ಸಣ್ಣಪಯ್ಯ ಮತ್ತು ಸಹಾಯಕ ನಿರೀಕ್ಷಕ ರಾಘವೇಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿರಾ ತಾಲೂಕಿನ ಎಲೆಯೂರು ಗ್ರಾಮದ ಮೀನುಗಾರಿಕೆ ಸಹಕಾರ ಸಂಘದ ಖಾತೆ ಬ್ಲಾಕ್ ಮಾಡಲಾಗಿತ್ತು. ಆದರೆ, ಈ ಖಾತೆ ಅನ್ ಬ್ಲಾಕ್ ಮಾಡುವುದಕ್ಕೆ ಈ ಇಬ್ಬರು ಅಧಿಕಾರಿಗಳು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಮೀನುಗಾರಿಕೆ ಸಂಘದ ಪದಾಧಿಕಾರಿ ರವೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ.