ಬೆಂಗಳೂರು : ಲಾಂಗ್ ತೋರಿಸಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ್ ಹಾಗೂ ಯೋಗಾನಂದ ಬಂಧಿತ ಆರೋಪಿಗಳು. ಈ ಇಬ್ಬರು ಸೆ.13ರಂದು ಗಣೇಶ ಹಬ್ಬದ ವೇಳೆ ಆರ್ಕೆಸ್ಟ್ರಾ ನೋಡಿ ವಾಪಸ್ ಆಗುತ್ತಿದ್ದ ಉಷಾ ಮತ್ತು ವರಲಕ್ಷ್ಮೀ ಎಂಬ ಮಹಿಳೆಯರಿಗೆ ಆರೋಪಿಗಳು ಪಲ್ಸರ್ ಬೈಕ್‌ನಲ್ಲಿ ಬಂದು ಕುತ್ತಿಗೆಗೆ ಲಾಂಗ್ ಇಟ್ಟು ಸರ ನೀಡುವಂತೆ ಬೆದರಿಸಿದ್ದಾರೆ, ಈ ವೇಳೆ ಉಷಾ ಹೆದರಿ ದರಿಸಿದ ಒಡವೆಗಳನ್ನು ಕೊಟ್ಟಿದ್ದಾಳೆ. ಆದರೆ ವರಲಕ್ಷ್ಮೀ ಪ್ರತಿರೋಧ ಒಡ್ಡಿದ್ದರಿಂದ ಯೋಗಾನಂದ ಆಕೆಯ ಬೆರಳನ್ನು ಕತ್ತರಿಸಿದ್ದಾನೆ.

ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಇಬ್ಬರು ಖದೀಮರನ್ನು ಬಂಧಿಸಲಾಗಿದೆ.